ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಿದ್ದ ಶ್ರೀಲೀಲಾ! ಕಾರಣ ಇದೇ ನೋಡಿ..

vijay
Published on

ವಿಜಯವಾಡ: ವಿಜಯ್ ದೇವರಕೊಂಡ 'ಜೆರ್ಸಿ' ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನಾನೂರಿ ಅವರೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ಗೊತ್ತೇ ಇದೆ. ಸದ್ಯ ಈ ಚಿತ್ರದ ಚಿತ್ರೀಕರಣ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಜನಪ್ರಿಯ ನಟ ಸತ್ಯದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರವು ಅಧಿಕೃತವಾಗಿ ಪ್ರಾರಂಭವಾದಾಗ, ಶ್ರೀಲೀಲಾ ಅವರನ್ನು ಚಿತ್ರದಲ್ಲಿ ನಾಯಕಿ ಎಂದು ಘೋಷಿಸಲಾಯಿತು ಮತ್ತು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸುತ್ತಿರುವ ಈ ಚಿತ್ರದಿಂದ ಈಗ ಶ್ರೀಲೀಲಾ ಹೊರಬಿದ್ದಿದ್ದಾರೆ ಎಂದು ಹೇಳಲಾಗಿದೆ. ಅವರ ಬದಲು ಭಾಗ್ಯಶ್ರೀ ಬೋರ್ಸೆ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿ ಇದ್ದಾರಂತೆ, ಆಕೆಯನ್ನೂ ಶೀಘ್ರದಲ್ಲೇ ಆಯ್ಕೆ ಮಾಡಲಿದ್ದಾರಂತೆ.

ಭಾಗ್ಯಶ್ರೀ ಬೋರ್ಸೆ ಹಿಂದಿ ಸಿನಿಮಾ 'ಯಾರಿಯನ್ 2' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ರವಿತೇಜ ಅಭಿನಯದ ‘ಮಿಸ್ಟರ್ ಬಚ್ಚನ್’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ ಈಗ ಈ ಚಿತ್ರ ಬಿಡುಗಡೆಗೆ ಮುನ್ನವೇ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಈ ಸಿನಿಮಾದ ಕಥೆ ಸಮುದ್ರದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ವಿಶಾಖಪಟ್ಟಣಂ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net