ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುವೆ, ಸಿಡಿ ಬಗ್ಗೆ ಏನನ್ನೂ ಕೇಳಬೇಡಿ: ಸತೀಶ್​ ಜಾರಕಿಹೊಳಿ

satish ramesh jarakiholi
Published on

ಬೆಳಗಾವಿ: ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಸಿಡಿ ವಿಚಾರವಾಗಿ ಯಾವುದೇ ಕಾರಣಕ್ಕೂ ಏನನ್ನೂ ಕೇಳಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಬಿ. ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಜತೆ ಸಭೆ ನಡೆಸಿದ ಬಳಿಕ ಹೊರ ಬಂದ ಸತೀಶ್​ ಜಾರಕಿಹೊಳಿಯನ್ನು ಸಿಡಿ ಕೇಸ್​ ಕುರಿತು ಸುದ್ದಿಗಾರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸತೀಶ್​, ಆ ಹುಡುಗಿ ಪೋಷಕರು ಆರೋಪ ಮಾಡಿದ್ರೆ ನಾ ಏನು ಮಾಡ್ಲೀ? ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಆ ಬಗ್ಗೆ ಏನೂ ಕೇಳಬೇಡಿ. ಪೋಷಕರ ಆರೋಪ, ಸಿಡಿ ವಿಚಾರ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಮನವಿ ಮಾಡಿದರು.

ಸಿಡಿ ಕೇಸ್​ ಬಗ್ಗೆ ನೋಡಿಕೊಳ್ಳಲು ಕಾನೂನು ಇದೆ, ಪೊಲೀಸರಿದ್ದಾರೆ. ಅವರನ್ನು ರಕ್ಷಣೆ ಮಾಡೋದು ಪೊಲೀಸರ ಕೆಲಸ. ಪ್ರತಿದಿನ‌ ಅದನ್ನೇ ಹೇಳಿ ಹೇಳಿ ಸಾಕಾಗಿದೆ. ನಿಮ್ಮ ಕೈಮುಗಿಯುತ್ತೇನೆ, ಸಿಡಿ ವಿಚಾರ ಪ್ರಸ್ತಾಪಿಸಬೇಡಿ ಎಂದು ಸತೀಶ್​ ಜಾರಕಿಹೊಳಿ ಹೇಳಿದರು. ಇದನ್ನೂ ಓದಿರಿ ಕೋರ್ಟ್​ಗೆ ಬರಲು ಸಿಡಿ ಲೇಡಿಗೆ ಅನುಮತಿ ಸಿಕ್ತು! ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಪ್ರಕರಣಕ್ಕೆ ಇಂದೇ ಕ್ಲೈಮಾಕ್ಸ್​?

ಇತ್ತ ಸಿಡಿ ಲೇಡಿಯ ನಡೆಯ ಭಾರೀ ಕುತೂಹಲ ಮೂಡಿಸಿದೆ. ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರ್ ಆಗ್ತೀನಿ ಎಂದು ಕೋರ್ಟ್​ಗೆ ಅರ್ಜಿ ಹಾಕಿರುವುದು ಬಾಲಚಂದ್ರ ಜಾರಕಿಹೊಳಿ‌ಗೆ ಟೆನ್ಷನ್​ ತರಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆಯಿಂದ ರಹಸ್ಯ ಸ್ಥಳದಲ್ಲಿರುವ ಬಾಲಚಂದ್ರ ಜಾರಕಿಹೊಳಿ ವಕೀಲರು ಹಾಗೂ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಗದ್ದಲದ ನಡುವೆಯೂ ಕುಂದಾನಗರಿ ಲೋಕಸಭಾ ಉಪಸಮರ ಜೋರಾಗಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಸತೀಶ್​ ಜಾರಕಿಹೊಳಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net