ಕೋರ್ಟ್​ಗೆ ಬರಲು ಸಿಡಿ ಲೇಡಿಗೆ ಅನುಮತಿ ಸಿಕ್ತು! ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಪ್ರಕರಣಕ್ಕೆ ಇಂದೇ ಕ್ಲೈಮಾಕ್ಸ್​?

CD case
Published on

ಬೆಂಗಳೂರು: ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಲು ಕೋರ್ಟ್​ ಅನುಮತಿ ಕೊಟ್ಟಿದೆ.

ಇನ್ನು ಯುವತಿ ವಿಚಾರಣೆಗೆ ಕೋರ್ಟ್​ಗೆ ಹಾಜರಾಗುವಂತೆ ಕೊರ್ಟ್​ ಅನುಮತಿ ಕೊಟ್ಟ ಆದೇಶ ಪ್ರತಿ ಪಡೆಯಲು ವಕೀಲ ಜಗದೀಶ್ ತೆರಳಿದ್ದಾರೆ. ಆದೇಶ ಪ್ರತಿ ಪಡೆದ ಬಳಿಕ ಯುವತಿ ವಿಚಾರಣೆಗೆ ಹಾಜರಾಗುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಹಿನ್ನೆಲೆ ಆಕೆಯ ಭದ್ರತೆಗೆ ಎಸ್ಐಟಿಯಿಂದ ಓರ್ವ ಮಹಿಳಾ ಸಬ್ಇನ್​ಸ್ಪೆಕ್ಟರ್ ಸೇರಿದಂತೆ 8 ಜನರ ತಂಡ ರಚನೆ ಮಾಡಲಿದೆ. ಯುವತಿ ಹೇಳಿದಲ್ಲಿ ತೆರಳಿ ಭದ್ರತೆ ನೀಡಲು, ಆಕೆಯ ಹೇಳಿಕೆ ದಾಖಲಿಸಲು ವಿಶೇಷ ತಂಡ ಸಿದ್ಧವಾಗಿದೆ. ಒಂದು ವೇಳೆ ಆಕೆಯೇ ನೇರವಾಗಿ ಹಾಜರಾದರೂ ಈ ತಂಡ ಭದ್ರತೆ ನೀಡಲಿದೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಇಂದು ಸ್ಫೋಟಕ ತಿರುವು ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದ್ದು, ಇಂದೇ ಯುವತಿ ಕೋರ್ಟ್​ಗೆ ಹಾಜರಾದರೆ ಈ ಪ್ರಕರಣಕ್ಕೆ ಒಂದು ಕ್ಲೈಮಾಕ್ಸ್​ ಸಿಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net