ಸರಿದಂತರ ಗೌರವ ಪುರಸ್ಕಾರ ಪ್ರದಾನ

Btw_Saridanta
Published on

ಬಂಟ್ವಾಳ: ಇಲ್ಲಿನ ಕೈಕಂಬ ಜೋಡುಮಾರ್ಗ ಸರಿದಂತರ ಪ್ರಕಾಶನದ ವತಿಯಿಂದ ಭಾನುವಾರ ಕೈಕಂಬ ಶಮ್ಯಾಪ್ರಾಸದಲ್ಲಿ ನಡೆದ ಸಮಾರಂಭದಲ್ಲಿ ಕೃಷಿ ಪಂಡಿತ, ಸಂಶೋಧಕ ಬದನಾಜೆ ಶಂಕರ ಭಟ್, ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಸರಿದಂತರ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.

ಮಂಗಳೂರು ರಾಮಕೃಷ್ಣ ಮಿಷನ್-ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾನವ ಸಂಬಂಧಗಳ ಕುರಿತು ಮಾತನಾಡಿದರು. ವೈದ್ಯ ಡಾ.ಎಂ.ಎಸ್.ಭಟ್ ಉಪಸ್ಥಿತರಿದ್ದರು. ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ ಪ್ರಸ್ತಾವನೆಗೈದರು. ಭಾರತಿ ರಾಮಕುಂಜ, ಮೇಧಾ ರಾಮಕುಂಜ ಸನ್ಮಾನ ಪತ್ರ ವಾಚಿಸಿದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net