ಧರ್ಮಸ್ಥಳ ಯೋಜನೆ ಡೈರಿ ವಿತರಣೆ

Kdb_Dairy
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಅಧ್ಶಕ್ಷರಿಗೆ 2025ನೇ ಹೊಸ ವರ್ಷದ ಡೈರಿ ವಿತರಣಾ ಕಾರ್ಯಕ್ರಮ ಮರ್ಧಾಳ ವಲಯ ಕಚೇರಿಯಲ್ಲಿ ನಡೆಯಿತು.

ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಒಕ್ಕೂಟದ ಅಧ್ಯಕ್ಷರಿಗೆ, ವಲಯದ ಸೇವಾಪ್ರತಿನಿಧಿಗಳಿಗೆ ಹಾಗೂ ಶೌರ್ಯಘಟಕದ ಘಟಕ ಪ್ರತಿನಿಧಿಯವರಿಗೆ ಡೈರಿಯನ್ನು ವಿತರಿಸಿ ಮಾತನಾಡಿದರು.

ಕೇಂದ್ರ ಒಕ್ಕೂಟ ಸಮಿತಿ ಹಾಗೂ ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷ ಸಂತೋಷ್ ಕೇನ್ಯ, ತಾಲೂಕು ಶೌರ್ಯ ಘಟಕದ ಕ್ಶಾಪ್ಟನ್ ಬಿಳಿನೆಲೆ ವಲಯ ಮರ್ಧಾಳ ಘಟಕದ ಪ್ರತಿನಿಧಿ ಭವಾನಿಶಂಕರ್ ಹೊಸ ವರ್ಷದ ಶುಭಹಾರೈಸಿದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಕೈಕಂಬ ಶಿವಕುಮಾರ್, ಕೊಡಿಂಬಾಳ ಧರ್ಮಪಾಲ ಕೊಂಬಾರು, ಸತೀಶ್ಚಂದ್ರ ರೈ ಬಂಟ್ರ, ಪದ್ಮಾವತಿ ಶಿರಿಬಾಗಿಲು ಹಾಗೂ ರಾಜೇಶ್ ಬಿಳಿನೆಲೆ, ಸೇವಾ ಪ್ರತಿನಿಧಿಗಳಾದ ದಿನೇಶ್ ನೆಕ್ಕಿಲಾಡಿ,ನೇತ್ರ ಬಂಟ್ರ, ಜ್ಞಾನಸೇಲ್ವಿ ಕೊಡಿಂಬಾಳ, ಗಣೇಶ್ ಕೊಂಬಾರು, ರೇಖಾ ಸುಳ್ಶ, ವಿನೊದ್ ಕುಮಾರ್ ಶಿರಿಬಾಗಿಲು, ಸಿಬ್ಬಂದಿ ನಿರ್ವಾಹಕಿ ನಿಶಾ ಕೊಣಾಜೆ ಉಪಸ್ಥಿತರಿದ್ದರು. ಬಿಳಿನೆಲೆ ಸೇವಾಪ್ರತಿನಿಧಿ ಸತೀಶ್ ಆಜಾನ ಸ್ವಾಗತಿಸಿದರು. ಕೊಣಾಜೆ ಸೇವಾಪ್ರತಿನಿಧಿ ಬೇಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net