

ನವದೆಹಲಿ: ಸಾಮಾನ್ಯವಾಗಿ ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ವಿಶೇಷವಾದ ಉಡುಗೆಯನ್ನು ಧರಿಸುತ್ತಾರೆ. ಪ್ರತಿಯೊಬ್ಬರೂ ವ್ಯಾಯಾಮ ಮಾಡಲು ಸುಲಭವಾದ ಜಿಮ್ ಉಡುಪುಗಳನ್ನು ಧರಿಸುತ್ತಾರೆ. ಅಂದರೆ, ಟಿ-ಶರ್ಟ್ ಮತ್ತು ಸ್ಪೋರ್ಟ್ಸ್ ಪ್ಯಾಂಟ್ ಧರಿಸುತ್ತಾರೆ.
ಜಿಮ್‌ಗೆ ಹೋಗುವಾಗ ಜೀನ್ಸ್ ಆಗಲಿ ಅಥವಾ ಸೀರೆ ಆಗಲಿ ಧರಿಸುವುದೇ ಇಲ್ಲ. ಧರಿಸಿದವರಿಗೆ ಎಂಟ್ರಿಯು ಇರಲ್ಲ. ಆದರೆ, ಇಲ್ಲೊಬ್ಬ ಯುವತಿ ಸೀರೆಯಲ್ಲಿ ಜಿಮ್‌ಗೆ ಹೋಗಿದ್ದು, ಆಕೆ ವರ್ಕೌಟ್ ಮಾಡುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೀರೆಯಲ್ಲಿ ವರ್ಕೌಟ್ ಮಾಡುತ್ತಿರುವ ಯುವತಿಯೇ ಇಡೀ ಜಿಮ್ನಲ್ಲಿ ಎಲ್ಲರ ಆಕರ್ಷಣೆಯಾಗಿದ್ದಾಳೆ. ತನ್ನ ಮಾದಕ ನೋಟವನ್ನು ಬೀರುತ್ತಾ ವಿವಿಧ ರೀತಿಯ ವರ್ಕೌಟ್ಗಳನ್ನು ಆಕೆ ಮಾಡಿದ್ದಾಳೆ. ಅದರಲ್ಲೂ ಯುವತಿಯ ಹಾಟ್ನೆಸ್ಗೆ ಎಲ್ಲರೂ ಫಿಧಾ ಆಗಿದ್ದಾರೆ.
ಈ ವಿಡಿಯೋವನ್ನು 'ಬ್ಯೂಟಿ ಕ್ವೀನ್ಸ್ ಹಾ' ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ‘ಸೂಪರ್ ವರ್ಕೌಟ್’ ಎಂದು ಒಬ್ಬರು ಕಾಮೆಂಟ್ ಮಾಡಿದರೆ.. ಮತ್ತೊಬ್ಬರು ‘ಪ್ರಿಯಾ ಪ್ರಕಾಶ್ ವಾರಿಯರ್ ಗಿಂತ ಸುಂದರ ಕಣ್ಣುಗಳನ್ನು ಹೊಂದಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ರೀನಾ ಸಿಂಗ್ ಎಂಬ ಯುವತಿ ಸೀರೆಯಲ್ಲಿ ಜಿಮ್ ವರ್ಕೌಟ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. (ಏಜೆನ್ಸೀಸ್)
ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ: https://x.com/Lovely_Queens1/status/1809575845243043930