ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಧರಿಸಿದ್ದ ಈ ಸನ್​ಗ್ಲಾಸ್​ ಬೆಲೆ ಕೇಳಿದ್ರೆ ಬೆರಗಾಗೋದು ಖಂಡಿತ!

prabhas
Published on

ಹೈದರಾಬಾದ್​: ಟಾಲಿವುಡ್ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ಕಿಂಗ್ ಎಂದರೆ ಮೊದಲು ಕೇಳಿ ಬರುವ ಹೆಸರೇ ಪ್ರಭಾಸ್.

ಬಾಹುಬಲಿಯಂತಹ ಅದ್ಧೂರಿ ಸಿನಿಮಾದ ಮೂಲಕ ಸೆನ್ಸೇಷನಲ್ ದಾಖಲೆ ಬರೆದ ಡಾರ್ಲಿಂಗ್ ಪ್ರಭಾಸ್, ಈ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದಿಂದ ತೆಲುಗಿನ ಜೊತೆಗೆ ಇತರ ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾಯಿತು.

ಬಾಹುಬಲಿ ನಂತರ ಸಾಹೋ, ರಾಧೆಶ್ಯಾಮ್ ಮತ್ತು ಆದಿಪುರುಷ ಒಂದೇ ರೀತಿಯ ಚಿತ್ರಗಳಿಂದ ಅಭಿಮಾನಿಗಳನ್ನು ನಿರಾಶೆಗೊಳಿಸಿದರು. ಆದರೆ, ಸಾಲಾರ್ ಮತ್ತು ಕಲ್ಕಿ ಮೂಲಕ ಪ್ರಭಾಸ್​ ಅಭಿಮಾನಿಗಳಿಗೆ ಡಬಲ್ ಟ್ರೀಟ್ ನೀಡಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ಕಲ್ಕಿ ಸಿನಿಮಾದ ಭರ್ಜರಿ ಯಶಸ್ಸಿನಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ಜಗತ್ತಿನಾದ್ಯಂತ ಕ್ರೇಜ್ ಹೆಚ್ಚಿಸಿದೆ. ಜೂನ್ 27 ರಂದು ತೆರೆಕಂಡ ಈ ಸಿನಿಮಾ 700 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿದೆ. ಸದ್ಯದಲ್ಲೇ ಈ ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರುವುದು ಖಚಿತ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಲ್ಕಿ ಚಿತ್ರದಲ್ಲಿ ಪಂಜಾಬಿ ಪಾಪ್ ಗಾಯಕ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಡಾರ್ಲಿಂಗ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಪ್ರಭಾಸ್ ಅವರ ಲುಕ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಂಜಾಬಿ ಶೈಲಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಕಲ್ಕಿ ಪ್ರಚಾರದ ಸಮಯದಲ್ಲಿ ನಟ ಪ್ರಭಾಸ್ ಡೋಲ್ಸ್ ಗಬ್ಬಾನಾ ಸನ್ ಗ್ಲಾಸ್ ಧರಿಸಿರುವುದು ಗೊತ್ತೇ ಇದೆ. ಇದೀಗ ನೆಟ್ಟಿಗರು ಆ ಸನ್‌ಗ್ಲಾಸ್‌ ಬೆಲೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಸೆಲೆಬ್ರಿಟಿ ಔಟ್ ಫಿಟ್ ಡಿಕೋಡ್ ಪ್ರಕಾರ, ಪ್ರಭಾಸ್ ಧರಿಸಿರುವ ಆ ಸನ್ ಗ್ಲಾಸ್ ಬೆಲೆ 35,314 ರೂಪಾಯಿ. ಇದೀಗ ಸನ್ ಗ್ಲಾಸ್ ಬೆಲೆ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net