ಸೀರೆಯುಟ್ಟು 120 ಕೆಜಿ ಭಾರ ಎತ್ತಿದ ನಾರಿ! ಮಹಿಳೆಯ ಹಾಟ್​ ವರ್ಕೌಟ್​ ನೋಡಿ ನೆಟ್ಟಿಗರು ಹೇಳಿದ್ದಿಷ್ಟು… Saree Woman in Gym

Saree Woman Gym
Published on

ನವದೆಹಲಿ: ಪ್ರತಿದಿನ ಅಂತರ್ಜಾಲದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ಜನರನ್ನು ಅಚ್ಚರಿಗೊಳಿಸುತ್ತವೆ. ಇತ್ತೀಚೆಗಷ್ಟೇ ಅಂಥದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲಿ ಮಹಿಳೆಯೊಬ್ಬರು ಜಿಮ್‌ನಲ್ಲಿ 120 ಕೆಜಿ ಭಾರ ಎತ್ತುತ್ತಿರುವುದನ್ನು ಕಾಣಬಹುದು. ಅಚ್ಚರಿ ಸಂಗತಿ ಏನೆಂದರೆ, ಆ ಮಹಿಳೆ ಸೀರೆ ( Saree Woman in Gym ) ಉಟ್ಟುಕೊಂಡು ಭಾರ ಎತ್ತಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

19 ಸೆಕೆಂಡುಗಳ ವಿಡಿಯೋದಲ್ಲಿ ಮಹಿಳೆ ಮೊದಲು ಭಾರಿ ತೂಕವನ್ನು ಎತ್ತಲು ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಆಕೆ ಹಸಿರು ಚಿಫೋನ್ ಸೀರೆಯನ್ನು ಉಟ್ಟಿದ್ದಾಳೆ. ತೂಕ ಎತ್ತುವ ಮುನ್ನ ಸೀರೆಯನ್ನು ಸೆರಗನ್ನು ಎತ್ತಿ ತನ್ನ ಸೊಂಟದ ಸುತ್ತಲೂ ಕಟ್ಟಿಕೊಳ್ಳುತ್ತಾಳೆ. ಅಲ್ಲದೆ, ಸೊಂಟಕ್ಕೆ ಬೆಲ್ಟ್​ ಸಹ ಕಟ್ಟಿಕೊಳ್ಳುತ್ತಾಳೆ. ಇದಾದ ಬಳಿಕ ಅನುಭವಿ ವೇಟ್​ ಲಿಫ್ಟರ್​ನಂತೆ 120 ಕೆಜಿಯನ್ನು ಸುಲಭವಾಗಿ ಎತ್ತುತ್ತಾಳೆ.

ಅಂದಹಾಗೆ ವಿಡಿಯೋದಲ್ಲಿ ಜಿಮ್​ ಅನ್ನು ತ್ರಿವರ್ಣ ಬಲೂನ್‌ಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ವಿಡಿಯೋ ಹಿನ್ನೆಲೆಯಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರದ ‘ಇಂಡಿಯಾ ವೇಲ್’ ಹಾಡು ಪ್ಲೇ ಆಗುತ್ತಿರುತ್ತದೆ. ಈ ವಿಡಿಯೋವನ್ನು ವರ್ಷನಾ ರಾಣಾ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೆ 42 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 23 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದಾರೆ.

ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು 120 ಕೆಜಿ ತೂಕ ಎತ್ತಿದ್ದಕ್ಕಾಗಿ ಮಹಿಳೆಯನ್ನು ಹೊಗಳಿದ್ದಾರೆ. 120 ಕೆಜಿ ಎತ್ತುವುದು ತಮಾಷೆಯಲ್ಲ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net