ಅಸುರನ್ ಸಿನಿಮಾದ ಸಹಾಯಕ ನಿರ್ದೇಶಕ ಶರಣ್​ ರಾಜ್ ಅಪಘಾತದಲ್ಲಿ ನಿಧನ

victim
Published on

ಹೈದರಾಬಾದ್​: ತಮಿಳು ಚಿತ್ರರಂಗದ ನಟ ಹಾಗೂ ಸಹಾಯಕ ನಿರ್ದೇಶಕ ಶರಣ್ ರಾಜ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಶರಣ್ ರಾಜ್ ಮೃತ. ಚೆನ್ನೈನ ಕೆಕೆ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶರಣ್ ಅವರ ಗೆಳೆಯರು ಹಾಗೂ ಅಭಿಮಾನಿಗಳು ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಜೂನ್ 8ರಂದು ರಾತ್ರಿ 11:30ರ ಸುಮಾರಿಗೆ ಶರಣ್ ರಾಜ್ ಅವರು ಬೈಕ್​ನಲ್ಲಿ ತೆರಳುತ್ತಿದ್ದರು. ಪಳನಿಪ್ಪನ್ ಹೆಸರಿನ ಪೋಷಕ ನಟ ಕುಡಿದು ಕಾರು ಚಲಾಯಿಸಿ ಶರಣ್ ರಾಜ್​ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಶರಣ್ ರಾಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ನಿಧನಹೊಂದಿದ್ದಾರೆ. ಪಳನಿಪ್ಪನ್ ವಿರುದ್ಧ ಕೇಸ್ ದಾಖಲಾಗಿದೆ. ಸದ್ಯ ಶರಣ್ ರಾಜ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನಿರ್ದೇಶಕ  ವೆಟ್ರಿಮಾರನ್​ಗೆ ಅವರಿಗೆ ಸಹಾಯಕರಾಗಿ ಶರಣ್ ರಾಜ್​ ಇದ್ದರು. ವೆಟ್ರಿಮಾರನ್  ‘ವಡಾ ಚೆನ್ನೈ’ ‘ಅಸುರನ್’ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.  ‘ಅಸುರನ್​’ ಸಿನಿಮಾದಲ್ಲಿ ಶರಣ್ ರಾಜ್ ಅವರು ಸಹಾಯಕ ನಿರ್ದೇಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net