ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ, ‘ಕ್ರಿಕೆಟ್ ದೇವರು’ ಎಂದೇ ಪ್ರೀತಿ, ಅಭಿಮಾನದಿಂದ ಕರೆಯಲ್ಪಡುವ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಪುತ್ರಿ ಸಾರಾ ತೆಂಡೂಲ್ಕರ್ ಯಾರಿಗೆ ಗೊತ್ತಿಲ್ಲ ಹೇಳಿ. ಚಿತ್ರರಂಗದ ತಾರೆ ಅಥವಾ ದೊಡ್ಡ ಸೆಲೆಬ್ರಿಟಿ ಅಲ್ಲದೇ ಹೋದರೂ ಸೆಲೆಬ್ರಿಟಿಗಳನ್ನು ಮೀರಿದ ಅಭಿಮಾನಿ ಬಳಗವನ್ನು ಸಾರಾ ಹೊಂದಿದ್ದಾರೆ. ಇದು ನಿಜಕ್ಕೂ ಹುಬ್ಬೇರಿಸುವಂತದ್ದು. ಕೇವಲ ಜಾಲತಾಣಗಳಲ್ಲಿ ಮಾತ್ರ ಮಿಂಚದ ಸಾರಾ, ಓದಿನಲ್ಲಿ ಮೇಲುಗೈ ಸಾಧಿಸಿ, ಹೆತ್ತವರನ್ನು ಹೆಮ್ಮೆ ಪಡಿಸಿದ್ದಾರೆ.
ಇದನ್ನೂ ಓದಿ: ಹೆಂಡತಿಯರಿಗೆ ನಿಜವಾಗಿಯೂ… ಬಿಸಿಸಿಐ ನೂತನ ನಿಯಮಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ Yograj Singh
ಬ್ರ್ಯಾಂಡ್ಗಳಿಗೆ ಮಾಡೆಲ್
ಕಳೆದ ವರ್ಷ ಸಾರಾ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, ಪೋಷಕರ ಸಂತಸಕ್ಕೆ ಕಾರಣರಾದರು. ಈ ಸ್ಥಾನಕ್ಕೆ ಬರಲು ನೀನು ವರ್ಷಗಳಿಂದ ಪಟ್ಟ ಶ್ರಮ ನೋಡಿದ ನಮಗೆ ತುಂಬ ಹೆಮ್ಮೆಯಾಗಿದೆ ಎಂದು ಸಚಿನ್ ತಮ್ಮ ಪುತ್ರಿಯ ಸಾಧನೆಯನ್ನು ಕೊಂಡಾಡಿದ್ದರು. ಓದಿನ ಜತೆ ಜತೆಗೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳಿಗೆ ಮಾಡೆಲ್ ಆಗಿರುವ ಸಾರಾ, ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಫೌಂಡೇಷನ್ನ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು. ಈ ಎಲ್ಲಾ ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಸುದ್ದಿಯಾಗುವ ಸಾರಾ, ತಮ್ಮ ಜೀವನದ ಒಂದಷ್ಟು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ವದಂತಿಗಳ ಸುರಿಮಳೆ
ಕೇವಲ ಕ್ರಿಕೆಟ್ ಸ್ಟೇಡಿಯಂಗೆ ಆಗಮಿಸಿ ಮ್ಯಾಚ್ ನೋಡಿದ್ರೂ, ಹೊರಗಡೆ ಹೋಟೆಲ್ನಲ್ಲಿ ಊಟ ಸವಿದರೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದ್ದ ಸಾರಾ, ಒಂದಲ್ಲ ಒಂದು ವಿಚಾರಗಳಿಂದ ನೆಟ್ಟಿಗರ ಟ್ರೋಲ್ಗಳಿಗೆ ಗುರಿಯಾಗುತ್ತಿದ್ದರು. ಟೀಂ ಇಂಡಿಯಾದ ಹೆಸರಾಂತ ಕ್ರಿಕೆಟಿಗ ಶುಭಮನ್ ಗಿಲ್ ಜತೆಗೆ ಸಾರಾ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ, ಇವರಿಬ್ಬರು ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂಬ ವದಂತಿಗಳನ್ನು ಅಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿಸಲಾಗಿತ್ತು. ಆದ್ರೆ, ಇದ್ಯಾವುದಕ್ಕೂ ಕಿವಿಗೊಡದ ಸಾರಾ, ತಮ್ಮ ಗುರಿಯನ್ನು ತಲುಪುವುದರತ್ತ ಹೆಚ್ಚು ಶ್ರಮಿಸುತ್ತಿರುವುದು ಖುಷಿಯ ಸಂಗತಿ.
ಅವನೇ ಜೀವನ
“ಈ ಜೀವನದಲ್ಲಿ ನನ್ನ ಪ್ರೀತಿಯ ಸಹೋದರನೇ ನನಗೆಲ್ಲಾ. ನನ್ನಗಿಂತ ಎರಡು ವರ್ಷ ಚಿಕ್ಕವನು ಅರ್ಜುನ್. ಅವನೇ ನನ್ನ ಜೀವನ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ರಹಸ್ಯಗಳಿಲ್ಲ. ನನ್ನಲ್ಲಿರುವ ರಹಸ್ಯಗಳೆಲ್ಲವೂ ಅವನಿಗೆ ಗೊತ್ತಿದೆ. ನಮ್ಮಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಅವನೊಬ್ಬ ಮನೆಯಲ್ಲಿಲ್ಲ ಎಂದರೆ ನನಗೆ ಏನೂ ಇಲ್ಲ ಎಂದೇ ಭಾಸವಾಗುತ್ತದೆ. ಅವನಲ್ಲಿ ಯಾವುದೇ ಗೊಂದಲ, ಪ್ರಶ್ನೆಗಳಿದ್ದರೂ ಅದನ್ನು ನನ್ನ ಬಳಿಯೇ ಮೊದಲು ಹಂಚಿಕೊಳ್ಳುತ್ತಾನೆ. ಇಲ್ಲಿಯವರೆಗೂ ನಮ್ಮಿಬ್ಬರ ನಡುವೆ ಒಂದು ಸಣ್ಣ ಜಗಳ, ಮನಸ್ತಾಪವು ನಡೆದಿಲ್ಲ ಅನ್ನೋದೇ ಖುಷಿ ವಿಚಾರ” ಎಂದಿದ್ದಾರೆ ಸಾರಾ,(ಏಜೆನ್ಸೀಸ್).
ಸನ್ಯಾಸತ್ವ ಪಡೆಯಲು, ಮದುವೆ ಆಗದಿರಲು ಪೋಷಕರೇ ಕಾರಣ! ಸ್ಫೋಟಕ ಸಂಗತಿ ಬಿಚ್ಚಿಟ್ಟ ಐಐಟಿ ಬಾಬಾ | IIT Baba