ಸುಶಾಂತ್​-ಸಾರಾ ಬ್ರೇಕಪ್​ ಆಗಿದ್ದೇಕೆ? ಇಲ್ಲಿದೆ ನೋಡಿ ಉತ್ತರ ...

Sar - Sushant - Final
Published on

ಮುಂಬೈ: ಸುಶಾಂತ್ ಸಿಂಗ್​ ರಜಪೂತ್​ ಅವರಿಗೆ ಸಾರಾ ಅಲಿ ಖಾನ್​ ಜತೆಗೆ ಸಂಬಂಧವಿತ್ತು, ಇಬ್ಬರೂ ತುಂಬಾ ಪ್ರೀತಿಸುತ್ತಿದ್ದರು, ಒಂದು ದಿನ ಸುಶಾಂತ್​ ಅವರನ್ನು ಸಾರಾ ಬಿಟ್ಟು ಹೋದರು ... ಇಂಥದ್ದೊಂದು ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ.

ಅಷ್ಟೇ ಅಲ್ಲ, ಸುಶಾಂತ್​ ಅವರು ಡಿಪ್ರೆಶನ್​ಗೆ ಜಾರುವುದಕ್ಕೂ, ರಿಯಾ ಚಕ್ರವರ್ತಿಗೆ ಹತ್ತಿರವಾಗುವುದಕ್ಕೂ ಸಾರಾ ಅಗಲಿಕೆಯೇ ಕಾರಣ ಎಂದು ಹೇಳಲಾಗುತ್ತದೆ. ಇಷ್ಟಕ್ಕೂ ಸುಶಾಂತ್​ ಅವರನ್ನು ಸಾರಾ ಬಿಟ್ಟು ಹೋಗಿದ್ದೇಕೆ? ಈ ಪ್ರಶ್ನೆಗೆ ಮಾತ್ರ ಇದುವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಆ ಉತ್ತರವನ್ನು ಸಾರಾ ಅಲಿ ಖಾನ್​, ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳ ಎದುರು ಹೇಳಿದ್ದಾರಂತೆ.

ಡ್ರಗ್ಸ್​ ವಿಷಯವಾಗಿ ಎನ್​ಸಿಬಿ ಅಧಿಕಾರಿಗಳು, ಸಾರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೊಟ್ಟಿದ್ದರು. ಅದರಂತೆ, ಸೆಪ್ಟೆಂಬರ್​ 26ರಂದು ಸಾರಾ, ಎನ್​ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಾರಾ, ತಾನೇಕೆ ಸುಶಾಂತ್​ ಅವರಿಂದ ದೂರಾದೆ ಎಂಬುದನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಅದರ ಪ್ರಕಾರ, ಸುಶಾಂತ್​ಗೆ ಯಾವುದೇ ಸಂಬಂಧದ ಬಗ್ಗೆಯೂ ನಿಷ್ಠೆ ಇರಲಿಲ್ಲವಂತೆ. ಅದೇ ಕಾರಣಕ್ಕೆ 2019ರಲ್ಲಿ ದೂರವಾಗಿದ್ದಾಗಿ ಸಾರಾ ಹೇಳಿಕೊಂಡಿದ್ದಾರಂತೆ. ಅದರ ಜತೆಗೆ, ಸುಶಾಂತ್​ ಜತೆಗೆ ನಡೆಸಿದ ಚಾಟ್​ಗಳನ್ನು ಸಹ ಅವರು ಅಧಿಕಾರಿಗಳಿಗೆ ತೋರಿಸಿದ್ದಾರಂತೆ.

ಸುಶಾಂತ್​ಗೆ ಸಾರಾ ಅಲ್ಲದೆ ಇನ್ನೂ ಕೆಲವು ಹುಡುಗಿಯರ ಜತೆಗೆ ಸಂಬಂಧ ಇತ್ತು ಎಂದು ಹೇಳಲಾಗಿದೆ. ಸಾರಾಗಿಂತ ಮುನ್ನ ಅಂಕಿತಾ ಲೋಖಂಡೆ, ಕೃತಿ ಸಾನನ್​ ಜತೆಗೆ ಹತ್ತಿರದ ಒಡನಾಟವಿದ್ದ ಸುಶಾಂತ್, ಆ ನಂತರ ಸಾರಾ ಅಲಿ ಖಾನ್​ಗೆ ಹತ್ತಿರವಾದರು ಎಂದು ಹೇಳಲಾಗುತ್ತದೆ. ಸಾರಾ ಜತೆಗೆ ಬ್ರೇಕ್​ಅಪ್​ ಆದ ನಂತರ ರಿಯಾ ಅವರ ಜತೆಗೆ ಲಿವ್​ ಇನ್​ ಸಂಬಂಧದಲ್ಲಿದ್ದ ಸುಶಾಂತ್​, ನಿಧನರಾಗುವುದಕ್ಕಿಂತ ಮುಂಚೆ, ರಿಯಾ ಜತೆಗೂ ಬ್ರೇಕ್​ಅಪ್​ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net