

ಬೆಂಗಳೂರು: 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡಗೆ ಒಂದು ಬಂಪರ್ ಆಫರ್ ಸಿಕ್ಕಿದೆ. 'ಕಾಂತಾರ' ನಂತರ ಅಭಿಷೇಕ್ ಅಂಬರೀಷ್ ಅಭಿನಯದ 'ಕಾಳಿ' ಚಿತ್ರದ ನಾಯಕಿಯಾಗಿ ಆಯ್ಕೆಯಾದ ಸಪ್ತಮಿ ಗೌಡ, ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.
'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸಪ್ತಮಿ ಗೌಡ ಒಪ್ಪಿಕೊಂಡಿದ್ದರೂ, ತಮ್ಮ ಪಾತ್ರ ಏನಿರಬಹುದು ಎಂಬ ವಿಷಯವನ್ನು ಮಾತ್ರ ಬಿಟ್ಟುಕೊಟ್ಟಲ್ಲ. ಇಲ್ಲಿ ಅವರು ನಾಯಕಿ ಎನ್ನುವುದಕ್ಕಿಂತ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುವುದಾಗಿ ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಸಪ್ತಮಿ, 'ದಿ ವ್ಯಾಕ್ಸಿನ್ ವಾರ್' ಸೆಟ್ನಲ್ಲೇ ಆಚರಿಸುತ್ತಿದ್ದಾರಂತೆ.
'ದಿ ವ್ಯಾಕ್ಸಿನ್ ವಾರ್' ಚಿತ್ರವು ನೈಜ ಘಟನೆಯೊಂದನ್ನು ಆಧರಿಸಿದೆ. ಚಿತ್ರವು ಇದೇ ವರ್ಷ ಸ್ವಾತಂತ್ರ್ಯ ದಿನದಂದು ಬಿಡಗುಡೆ ಮಾಡುತ್ತಿದ್ದಾರೆ. ಐ ಆಮ್ ಬುದ್ಧ ಸಂಸ್ಥೆಯಡಿ ಈ ಚಿತ್ರವನ್ನು ನಟಿ ಪಲ್ಲವಿ ಜೋಷಿ ನಿರ್ಮಿಸುತ್ತಿದ್ದಾರೆ. 11 ಭಾಷೆಗಳಲ್ಲಿ ಈ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ.