ಆಗ ಹಾಗೆ, ಈಗ ಹೀಗೆ … 'ಕೆಡಿ' ಚಿತ್ರಕ್ಕೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ

Dhruva Sarja - Prem - Final
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್​' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಹೀಗಿದ್ದರೂ ಅವರೇಕೆ ಪ್ರೇಮ್​ ನಿರ್ದೇಶನದ 'ಕೆಡಿ - ದಿ ಡೆವಿಲ್​' ಚಿತ್ರದ ಚಿತ್ರೀಕರಣ ಇನ್ನೂ ಪ್ರಾರಂಭಿಸಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ.

ಧ್ರುವ ಸರ್ಜಾ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಕಾರಣ, ಅವರು ತೂಕ ಇಳಿಸಿಕೊಳ್ಳುವುದರಲ್ಲಿ ಬಿಜಿಯಾಗಿದ್ದರು. 'ಮಾರ್ಟಿನ್​' ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಧ್ರುವ, ಈಗ 'ಕೆಡಿ - ದಿ ಡೆವಿಲ್​'ಗಾಗಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. 'ಮಾರ್ಟಿನ್​'ಗೆ ಹೋಲಿಸಿದರೆ ಸಾಕಷ್ಟು ಸಪೂರ ಆಗಿರುವ ಅವರು, ಈಗ ಹೊಸ ರೂಪದಲ್ಲಿ ಸದ್ಯದಲ್ಲೇ 'ಕೆಡಿ - ದಿ ಡೆವಿಲ್​' ಚಿತ್ರದ ಸೆಟ್​ಗೆ ಎಂಟ್ರಿ ಕೊಡಲಿದ್ದಾರೆ.

'ಕೆಡಿ - ದಿ ಡೆವಿಲ್​' ಚಿತ್ರದ ಮುಹೂರ್ತ ಏ. 24ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಆದರೆ, ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್​' ಚಿತ್ರದ ಚಿತ್ರೀಕರಣ ಮುಗಿದಿಲ್ಲವಾದ್ದರಿಂದ, ಅವರ ಭಾಗದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಸದ್ದಿಲ್ಲದೆ ರವಿಚಂದ್ರನ್​ ಮುಂತಾದ ಕಲಾವಿದರ ಭಾಗದ ಚಿತ್ರೀಕರಣ ಮಾಡುವಲ್ಲಿ ನಿರತರಾಗಿರುವ ಪ್ರೇಮ್​, ಸದ್ಯಕ್ಕೆ ಧ್ರುವೆ ಆಕ್ಷನ್​-ಕಟ್​ ಹೇಳಲಿದ್ದಾರೆ.

'ಕೆಡಿ - ದಿ ಡೆವಿಲ್​' ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ಸ್​ನಡಿ ನಿಶಾ ವೆಂಕಟ್​ ಕೋನಾಂಕಿ ನಿರ್ಮಾಣ ಮಾಡುತ್ತಿದ್ದು, ವಿಲಿಯಂ ಡೇವಿಡ್​ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತವಿದೆ. ಧ್ರುವ ಜತೆಗೆ ಬಾಲಿವುಡ್​ ನಟ ಸಂಜಯ್​ ದತ್​, ರವಿಚಂದ್ರನ್​, ಶಿಲ್ಪಾ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net