More

    ಬೆಂಗಳೂರಿನಲ್ಲಿ ಎರಡನೇ ಕ್ಯಾಂಪಸ್​ ನಿರ್ಮಾಣ ಶುರು ಮಾಡಿದ ಎಸ್​ಎಪಿ; 15,000 ಸಾವಿರ ಉದ್ಯೋಗ ಸೃಷ್ಟಿ

    ಬೆಂಗಳೂರು ಗ್ರಾಮಾಂತರ: ಎಸ್​ಎಪಿ ಲ್ಯಾಬ್ಸ್ ಸಂಸ್ಥೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಸ್ಥಳಾವಕಾಶ ಕಲ್ಪಿಸುವ  ತನ್ನ ಎರಡನೆಯ ಕ್ಯಾಂಪಸ್ ಗೆ ಭೂಮಿ ಪೂಜೆಯನ್ನು ಮಾಡಿದೆ. ಈ ಕ್ಯಾಂಪಸ್ ದೇವನಹಳ್ಳಿಯಲ್ಲಿ ಸಿದ್ಧಗೊಳ್ಳಲಿದೆ. 

    ಎಸ್​ಎಪಿ ಮತ್ತು ಕರ್ನಾಟಕ 25 ವರ್ಷಗಳ ಬಂಧ ಹೊಂದಿದೆ.ಬಹು ರಾಷ್ಟೀಯ ಕಂಪನಿ ಯಾದ ಎಸ್​ಎಪಿಯ  ಅತೀ ದೊಡ್ಡ ಸಾಫ್ಟ್ವೇರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಇವತ್ತು ಬೆಂಗಳೂರಿನಲ್ಲಿದೆ. ಬಹುರಾಷ್ಟ್ರೀಯ ಕಂಪನಿ ಎಸ್​ಎಪಿಯ  ಸುಮಾರು 40%  ವಿಶ್ವದ ಆರ್ ಅಂಡ್ ಡಿ  ಕೊಡುಗೆಯನ್ನು ಇಲ್ಲಿಂದ  ಕೊಡುತ್ತಿದ್ದಾರೆ  ಎಂದರೆ ಕರ್ನಾಟಕ ಮತ್ತು ಭಾರತ ಎಸ್​ಎಪಿಯ ದೃಷ್ಟಿಯಿಂದ ಎಷ್ಟು ಮಹತ್ತರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

    ಎಸ್​ಎಪಿಯ ಲ್ಯಾಬ್ಸ್ ಸಂಸ್ಥೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹತ್ತಾರು ಸಾವಿರ ಉದ್ಯೋಗಗಳನ್ನು ಇಲ್ಲಿ ಸೃಷ್ಟಿ ಮಾಡುತ್ತಿದೆ. ಕಳೆದ ಇಪ್ಪತ್ತೈದು  ವರ್ಷಗಳಿಂದ ಎಸ್​ಎಪಿ ಸಂಸ್ಥೆ ಕರ್ನಾಟಕ ಹಾಗೂ ಭಾರತದ ಜೊತೆಗಿರುವ ಬಂಧ ಹಾಗೂ ಬದ್ಧತೆಯ ದ್ಯೋತಕವಾಗಿ ಬರುತ್ತಿರುವುದರಿಂದ ಈ ಕ್ಯಾಂಪಸ್​ಗೆ ವಿಶೇಷವಾದ ಅರ್ಥವಿದೆ. 

    SAP

    ಇಂತಹ ಒಂದು ಬಹು ನಿರೀಕ್ಷಿತ, ಬಹು ಮುಖ್ಯ ಕಟ್ಟಡದ  ಭೂಮಿ  ಪೂಜೆಯನ್ನು ಎಸ್​ಎಪಿಯ ಲ್ಯಾಬ್ಸ್ , ಇಂಡಿಯಾ ಇದರ ಎಂ ಡಿ ಮತ್ತು ಎಸ್​ವಿಪಿ  ಶ್ರೀಮತಿ ಸಿಂಧು ಗಂಗಾಧರನ್  ಅವರು  ಭೂಮಿ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು “ಎಸ್​ಎಪಿಯ ಲ್ಯಾಬ್ಸ್ , ಇಂಡಿಯಾ ಸಂಸ್ಥೆ ತನ್ನ ಇಪ್ಪತ್ತೈದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

    ಇದನ್ನೂ ಓದಿ: 30 ಕೋಟಿ ರೂ. ಮೌಲ್ಯದ ಕೊಕೇನ್​ ಕಳ್ಳ ಸಾಗಣೆ; ಲೈಬೀರಿಯಾ ಮೂಲದ ಮಹಿಳೆ ಅರೆಸ್ಟ್​​

    ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಇನ್ನೊಂದು ಹೊಸ ಕ್ಯಾಂಪಸ್ ನ್ನು ಪ್ರಾರಂಭ ವನ್ನು ಘೋಷಿಸಲು ನಾವು ಹರ್ಷಿಸುತ್ತೇವೆ . ಈ ಕ್ಯಾಂಪಸ್  ಹದಿನೈದು ಸಾವಿರ ಹೆಚ್ಚಿನ ಉದ್ಯೋಗಳನ್ನು ಸೃಷ್ಟಿಸಲಿದೆ . ಇದರ ಜೊತೆಗೆ ಇದು ಹೆಚ್ಚು ಪರಿಸರ ಸ್ನೇಹಿ ಆಗಿರಲಿದೆ. ಇದರಿಂದ ಯಾವುದೇ ರೀತಿಯ ಕಾರ್ಬನ್ ಎಮಿಶನ್ ಇರುವುದಿಲ್ಲ – ನೀರಿನ ಮರು ಪೂರಣ ಮತ್ತು ಬಳಕೆಯಿಂದ ನೀರನ್ನು ಹೆಚ್ಚು ಉಪಯೋಗಿಸುವುದಿಲ್ಲ.

    ಈ ಕ್ಯಾಂಪಸ್ ಹೆಚ್ಚು ಪರಿಸರ ಮತ್ತು ಉದ್ಯೋಗಿಗಳ ನ್ನೆ ಹೆಚ್ಚು ಗಮನದಲ್ಲಿ ಇಟ್ಟು ಕೊಂಡು ಕಟ್ಟಲಾಗುತ್ತದೆ. ಇಂತಹ ಒಂದು ಬಹು ನಿರೀಕ್ಷಿತ ಕ್ಯಾಂಪಸ್ ನ  ಮೊದಲ ಹಂತ 2025ರ ಹೊತ್ತಿಗೆ ಉದ್ಘಾಟನೆ ಆಗಲಿದೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts