

ಗಂಗೊಳ್ಳಿ: ಹಳೇ ಕಟ್ಟಡದಲ್ಲಿದ್ದ ಅಂಗನವಾಡಿ ಕೇಂದ್ರವನ್ನು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆಯ ಸಮಾನ ಮನಸ್ಕರ ತಂಡ ಸ್ಥಳೀಯ ಶಿಕ್ಷಣಭಿಮಾನಿ, ದಾನಿಗಳ ನೆರವಿನಿಂದ ಹೊಸ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಅಂಗನವಾಡಿ ಪುನರಾರಂಭ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಉದ್ಘಾಟಿಸಿದರು. ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅನಸ್ಕರಿಯಾ, ಗಜ್ಜಾಡಿ ಗ್ರಾಪಂ ಸದಸ್ಯ ಜನಾರ್ದನ ಪೂಜಾರಿ, ಊರಿನ ಹಿರಿಯರಾದ ಗಣಪತಿ ಪಟೇಲ್, ಅಂಗನವಾಡಿ ಶಿಕ್ಷಕಿಯರಾದ ಸಾವಿತ್ರಿ, ಸರಸ್ವತಿ, ವರದಿಗಾರ ದಾಮೋದರ್ ಮೊಗವೀರ ನಾಯಕವಾಡಿ, ಕೃಷ್ಣ ಪಟೇಲ್, ಸತೀಶ್ ಕಂಚುಗೋಡು, ಅಂಬಿಕಾ, ಪ್ರದೀಪ್ ಪಟೇಲ್, ನಾಗೇಶ್, ಕೃಷ್ಣ, ರವಿ, ಸಂದೀಪ್, ಸತೀಶ್ ಪಟೇಲ್, ಸದಾಶಿವ, ರಾಘವೇಂದ್ರ ಪೂಜಾರಿ, ಪಾಲಕರು ಉಪಸ್ಥಿತರಿದ್ದರು.