ಹಸಿರುಜೀವ ಅಭಿಯಾನಕ್ಕೆ ಚಾಲನೆ

1 Min Read
hasiru abhiyana
ಹಸಿರುಜೀವ ಅಭಿಯಾನಕ್ಕೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಚಾಲನೆ ನೀಡಿದರು

ವಿಜಯವಾಣಿ ಸುದ್ದಿಜಾಲ ಕೋಟ

ಗಿಡಮರದ ಬಗ್ಗೆ ನಿರ್ಲಕ್ಷೃ ಬಿಟ್ಟು, ಒಂದಿಷ್ಟು ಪರಿಸರ ಉಳಿಸುವ ಕಾರ್ಯ ಆಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.

ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಕೋಟ, ಸಮುದ್ಯತಾ ಗ್ರೂಪ್ಸ್ ಸಹಯೋಗದೊಂದಿಗೆ ಟೀಮ್ ಭವಾಬ್ಧಿ ಪಡುಕರೆ ಸಂಯೋಜನೆಯೊಂದಿಗೆ ವಿಶ್ವಪರಿಸರದ ದಿನದ ಅಂಗವಾಗಿ 210ನೇ ಭಾನುವಾರ ಹಸಿರುಜೀವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಉದ್ಯಮಿ ಮಧುಸೂದನ್ ಹೇರೂರು, ಪಂಚವರ್ಣ ಅಧ್ಯಕ್ಷ ಅಜಿತ್ ಆಚಾರ್, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ತಿಂಗಳಾಯ, ಪಂಚವರ್ಣ ಮಹಿಳಾ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಪಂಚವರ್ಣ ಸಂಚಾಲಕ ಅಮೃತ್ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಟೀಮ್ ಭವಾಬ್ಧಿ ಪಡುಕರೆ ದೇವೇಂದ್ರ ಶ್ರೀಯಾನ್, ಚೇತನ್ ಕುಂದರ್, ಉದಯ್ ಬಂಗೇರ, ಗಣೇಶ್ ತಿಂಗಳಾಯ, ಭರತ್ ಪೂಜಾರಿ, ಸಂತೋಷ್, ದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

See also  ತೆಕ್ಕಟ್ಟೆಯಲ್ಲಿ ಮತ್ತೋರ್ವ ಕ್ವಾರಂಟೈನ್
Share This Article