ಆರೋಗ್ಯಯುತ ಶರೀರದಿಂದ ಮನಸ್ಸು ಸಧೃಢ

kreede
Published on

ಕೊಕ್ಕರ್ಣೆ: ಸದೃಢ ಶರೀರದಲ್ಲಿ ಮಾತ್ರ ಸದೃಢವಾದ ಮನಸ್ಸಿರುತ್ತದೆ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹೇಳಿದರು.

ಬ್ರಹ್ಮಾವರ ವಲಯದ ಕಳ್ತೂರು ಸಂತೆಕಟ್ಟೆಯ ಅರ್ಬೆಟ್ಟು ವಾಮನ ಕಾಮತ್ ಫೌಂಡೇಶನ್ ಸರ್ಕಾರಿ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕಳ್ತೂರು ಕೆಂಜೂರು ಗ್ರಾಪಂ ಅಧ್ಯಕ್ಷ ನವೀನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳ ಪಥ ಸಂಚಲನದ ಗೌರವ ಸ್ವೀಕರಿಸಿದರು. ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.

ಗ್ರಾಪಂ ಉಪಾಧ್ಯಕ್ಷ ರಮಾನಂದ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ಪೂಜಾರಿ, ಉಪಾಧ್ಯಕ್ಷೆ ಸುಗುಣಾ, ನಾಮನಿರ್ದೇಶಿತ ಸದಸ್ಯ ಮನೋಜ ಶೆಟ್ಟಿ ಇದ್ದರು. ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ಸ್ವಾಗತಿಸಿದರು. ಸಹಶಿಕ್ಷಕ ಕೃಷ್ಣ ಎಂ. ವಂದಿಸಿದರು. ಪ್ರಶಾಂತ ಶೆಟ್ಟಿ ನಿರೂಪಿಸಿದರು. ಪ್ರೌಢಶಾಲೆ ದೈಹಿಕ ಶಿಕ್ಷಕಿ ರೇಣುಕಾ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕ ಸುರೇಶ ಬಾಬು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net