ಸಂತಡ್ಕ ವಿಜಯ ಫ್ರೆಂಡ್ಸ್ ಕ್ಲಬ್ ಮೊಸರು ಕುಡಿಕೆ ಉತ್ಸವ

29-mosaru
Published on

ಮಂಜೇಶ್ವರ: ಸಂತಡ್ಕ ಶ್ರೀಅರಸು ಸಂಕಲ ದೈವಕ್ಷೇತ್ರದ ವಠಾರದಲ್ಲಿ ವಿಜಯ ಫ್ರೆಂಡ್ಸ್ ಕ್ಲಬ್ ಸಂತಡ್ಕ ಮತ್ತು ಟೀಮ್ ಗರುಡ ಸಂತಡ್ಕ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಮೊಸರು ಕುಡಿಕೆ ಉತ್ಸವ ನಡೆಯಿತು.

ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಭಟ್ ಉದ್ಘಾಟಿಸಿ ಶುಭಹಾರೈಸಿದರು. ಸಮಿತಿ ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ, ರಮೇಶ್ ಎಂ.ಸಂತಡ್ಕ ಹಾಗೂ ಪದಾಧಿಕಾರಿಗಳು, ಸದಸ್ಯರು, ಟೀಮ್ ಗರುಡ ಸದಸ್ಯರು, ಅರಸು ಸಂಕಲ ದೈವಸ್ಥಾನ ಸ್ವಯಂಸೇವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net