ಸಂಸ್ಕೃತ ಭಾಷೆಯಲ್ಲಿ ಅಗಾಧ ಜ್ಞಾನ ಸಂಪತ್ತು

poorna
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಸ್ಕೃತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ ಹೆಬ್ಬಾರ್ ಮಾತನಾಡಿದರು
Published on

ಪಡುಬಿದ್ರಿ: ಸಂಸ್ಕೃತ ಭಾಷೆಯಲ್ಲಿ ಅಗಾಧವಾದ ಜ್ಞಾನ ಸಂಪತ್ತಿದೆ. ಸಂಸ್ಕೃತದಿಂದಲೇ ಎಲ್ಲ ಭಾಷೆಗಳು ಹುಟ್ಟಿಕೊಂಡಿವೆ. ಈ ಭಾಷೆಯ ವ್ಯಾಕರಣ ಅತ್ಯಂತ ವೈಜ್ಞಾನಿಕವಾಗಿದೆ, ಇದನ್ನು ತಿಳಿದುಕೊಳ್ಳುವ ಅಗತ್ಯ ನಮಗೆಲ್ಲ ಇದೆ. ಸಂಸ್ಕೃತದಿಂದ ವಂಚಿತರಾದರೆ ಸಂಸ್ಕೃತಿಯಿಂದ ದೂರ ಸರಿದಂತೆ ಸರಿ ಎಂದು ಅದಮಾರು ಮಠ ಆದರ್ಶ ಗುರುಕುಲ ವೇದ ಅಧ್ಯಾಪಕ ಜ್ಞಾನೇಶ್ವರ ಹೆಬ್ಬಾರ್ ಹೇಳಿದರು.

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಸ್ಕೃತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣಪ್ರಜ್ಞ ಆಡಳಿತ ಮಂಡಳಿ ಸದಸ್ಯ ಪ್ರೊ.ನಿತ್ಯಾನಂದ ಮಾತನಾಡಿ, ಸಂಸ್ಕೃತ ಒಂದು ದೇವ ಭಾಷೆ ಮಾತ್ರವಲ್ಲ ಕಂಪ್ಯೂಟರಿಗೆ ಹತ್ತಿರವಾದ ಭಾಷೆಯೂ ಹೌದು. ಮತ್ತೂರು ಗ್ರಾಮ ಸಂಪೂರ್ಣ ಸಂಸ್ಕೃತ ಗ್ರಾಮವೆಂದೇ ಪ್ರಸಿದ್ಧವಾಗಿದೆ ಇಂತಹ ವಾತಾವರಣ ಎಲ್ಲೆಡೆ ನಿರ್ಮಾಣವಾಗಬೇಕು ಎಂದರು.

ಕಾಲೇಜು ಪ್ರಾಚಾರ್ಯ ಸಂಜೀವ ನಾಯ್ಕ, ನಿವೃತ್ತ ಪ್ರಾಚಾರ್ಯ ಬಿಆರ್.ನಾಗರತ್ನ, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಸ್ರೀಕಾಂತ್ ರಾವ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಮುಖ್ಯಶಿಕ್ಷಕಿ ನಿಶ್ಮಿತಾ ಶೆಟ್ಟಿ ಸಂಸ್ಕೃತ ಉಪನ್ಯಾಸಕ ಜಯಶಂಕರ ಕಂಗಣ್ಣಾರು ಉಪಸ್ಥಿತರಿದ್ದರು. ಅನ್ವಿತಾ ಸಿರಿ ಸ್ವಾಗತಿಸಿದರು. ವಿಶ್ವೇಶ್ವರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರದ್ಯುಮ್ನ ಆಚಾರ್ಯ ವಂದಿಸಿದರು.

ಭರತನಾಟ್ಯ, ಸಮೂಹ ಗಾಯನ

ಸಂಸ್ಕೃತೋತ್ಸವದ ಅಂಗವಾಗಿ ಸ್ತೋತ್ರ ಪಠಣ ವೇದಘೋಷ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಸಮೂಹ ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net