

ಬೈಂದೂರು: ಬೈಂದೂರು ತಾಲೂಕಿನ ತಗ್ಗರ್ಸೆ ವಸ್ರೆ ಓಣಿಮನೆಯ ಸಂಧ್ಯಾ ಕೆ.ವಿ. ಅವರ ಪುತ್ರ ಸ್ಕಂದನಿಗೆ ಲಿವರ್ ಕಸಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನಮಂಗಳ ಕಾರ್ಯಕ್ರಮದಡಿ 50,000ರೂ. ಮೊತ್ತದ ಸಹಾಯಧನ ಮಂಜೂರು ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ.ವಿನಾಯಕ ಪೈ ಮಂಜೂರಾತಿ ಪತ್ರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷ ಮಂಜು ಪೂಜಾರಿ, ಗೋಳಿಹೊಳೆ ವಲಯಾಧ್ಯಕ್ಷ ನಾರಾಯಣ ಗೌಡ, ಒಕ್ಕೂಟ ಅಧ್ಯಕ್ಷೆ ಸವಿತಾ ಶೆಟ್ಟಿ, ಮೇಲ್ವಿಚಾರಕಿ ಸಂಗೀತಾ, ಸೇವಾಪ್ರತಿನಿಧಿ ಜ್ಯೋತಿ, ಮೂಕಾಂಬಿಕೆ ಮತ್ತು ಪದಾಧಿಕಾರಿಗಳು ಇದ್ದರು.