

ಪಡುಬಿದ್ರಿ: ದೇವರ ಪ್ರೀತ್ಯರ್ಥವಾಗಿ ಹಾಡುವ ಹಾಡೇ ಸಂಕೀರ್ತನೆಯಾಗಿದೆ. ಇದರಲ್ಲಿ ಲೌಕಿಕ ಬಯಕೆಗಳಿರುವುದಿಲ್ಲ ಎಂದು ಅದವಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿ ಶ್ರೀ ವನದುರ್ಗಾ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಶ್ರೀ ವಾದಿರಾಜ ತುಳಸಿ ನಾಮ ಸಂಕೀರ್ತನಾ ಮಂಡಳಿಯ ದ್ವಿತೀಯ ವರ್ಷದ ಕಾರ್ತಿಕ ವಾಸದ ಸಂಕೀರ್ತನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇವಸ್ಥಾನದ ತೀರ್ಥಮಂಟಪ ನಿರ್ವಾಣ ಕಾರ್ಯಕ್ಕೆ ಸಹಕರಿಸಿದ ಸವಾಜ ಬಾಂಧವರನ್ನು ಶ್ರೀಗಳು ಗೌರವಿಸಿದರು.
ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್ ದಂಪತಿ, ಅರ್ಚಕರಾದ ರಾಮಕೃಷ್ಣ ಆಚಾರ್ಯ, ಗುರುರಾಜ ಆಚಾರ್ಯ, ಪಾತ್ರಿಗಳಾದ ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ ಪೇಟೆಮನೆ, ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ರಾವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪಿ.ಎಚ್.ಶ್ರೀನಿವಾಸ ಶರ್ಮ ನೇತೃತ್ವದಲ್ಲಿ ತುಳಸೀ ಸಂಕೀರ್ತನೆ ನಡೆಯಿತು. ಪ್ರದ್ಯುಮ್ನ ಆಚಾರ್ಯ ಪೂಜಾ ವಿಧಿ ವಿಧಾನ ನೆರವೇರಿಸಿದರು. ಪಿ.ಎಚ್.ರವೀಂದ್ರನಾಥ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜ್ವಲ್ ರಾವ್ ಸ್ವಾಗತಿಸಿದರು. ಬಾಲಪ್ಪ ಗುರಿಕಾರ ನಟರಾಜ ಪಿ.ಎಸ್. ವಂದಿಸಿದರು. ಗುರುಪ್ರಸಾದ ರಾವ್ ನಿರೂಪಿಸಿದರು.