ಸರ್ಕಾರದ ಸೌಲಭ್ಯ ನೇರವಾಗಿ ರೈತರಿಗೆ ತಲುಪಲಿ

gan (1)
Published on

ಕುಂದಾಪುರ: ಉತ್ತಮ ಮಳೆ ಬಿಸಿಲು ಚಳಿ ಇದ್ದರೆ ರೈತನಿಗೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಆದರೆ ಇಂದಿನ ದಿನಗಳಲ್ಲಿ ನಾಟಿ ಮಾಡುವ ಸಂದರ್ಭದಲ್ಲಿ ಮಳೆ ಇರುವುದಿಲ್ಲ. ಕಟಾವು ಸಂದರ್ಭದಲ್ಲಿ ವಿಪರೀತ ಮಳೆ. ಅತಿವೃಷ್ಟಿಯಿಂದ ಬೆಳೆ ಹಾನಿ ಆದರೂ ರೈತರು ದೀಪಾವಳಿ ಹಬ್ಬ ಆಚರಿಸಿ ಹಿಂದಿನಿಂದ ಬಂದ ಆಚರಣೆಯನ್ನು ಮುಂದುವರಿಸುತ್ತಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ನೇರವಾಗಿ ರೈತರಿಗೆ ಸಿಗುವಂತೆ ಮಾಡಬೇಕು ಎಂದು ಹಟ್ಟಿಯಂಗಡಿ ಕನ್ಯಾನದ ನಮ್ಮ ಭೂಮಿ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಗಾಣಿಗ ಹೇಳಿದರು.

ಕುಂದಾಪುರ ರೋಟರಿ ದಕ್ಷಿಣ, ಹಟ್ಟಿಯಂಗಡಿ ನಮ್ಮ ಭೂಮಿ ಸಂಸ್ಥೆ, ಹರೆಗೋಡು ಮಹಾವಿಷ್ಣು ಯುವಕ ಮಂಡಲ ಹಾಗೂ ನಂದಿಕೇಶ್ವರ ಯುವ ಸಮಿತಿ ಆಶಯದಲ್ಲಿ ಹರೆಗೋಡಿನಲ್ಲಿ ರೈತರೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಂವಾದ ಹಾಗೂ ಮಣ್ಣಿನ ಹಣತೆ ವಿತರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕುಂದಾಪುರ ರೋಟರಿ ದಕ್ಷಿಣ ಸಂಸ್ಥೆ ಅಧ್ಯಕ್ಷ ಸಚಿನ್ ನಕ್ಕತ್ತಾಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಜೆರಾಲ್ಡ್ ಕ್ರಾಸ್ತ, ನಮ್ಮ ಭೂಮಿ ಸಂಸ್ಥೆ ಕಾರ್ಯಕರ್ತ ನರಸಿಂಹ ಗಾಣಿಗ, ಸೀತಾರಾಮ ಆಚಾರ್ಯ ಹರೆಗೋಡು, ನಂದಿಕೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪುಟ್ಟ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಮಹೇಶ್ ಆಚಾರಿ ಸ್ವಾಗತಿಸಿದರು. ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದೀಪಕ್ ಕುಮಾರ್ ವಂದಿಸಿದರು. ರೈತ ಬಾಂಧವರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮಣ್ಣಿನ ಹಣತೆಯನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net