‘ಗಂಗೂಬಾಯಿ’ ಚಿತ್ರಕ್ಕೆ ಅಡ್ಡಿಯಾಯ್ತು ಕರೊನಾ​ ಲಾಕ್​ಡೌನ್​; ನೆಲಕಚ್ಚಲಿದೆ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅದ್ದೂರಿ ಸೆಟ್​

alia_saanjay_leela_bhansali
Published on

ಮುಂಬೈ: ಎಲ್ಲ ಅಂದುಕೊಂಡಂತೆ ಆಗಿದ್ದರೆ ಆ ಕಾಸ್ಟ್ಲಿ ಸೆಟ್​ನಲ್ಲಿ ಈಗಾಗಲೇ ಬಾಲಿವುಡ್​ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಗಂಗೂಬಾಯಿ ಕಾಥೈವಾಡಿ’ ಸಿನಿಮಾ ಚಿತ್ರದ ಶೂಟಿಂಗ್​ ನಡೆಯುತ್ತಿರಬೇಕಿತ್ತು. ಆದರೆ. ಕರೊನಾದಿಂದಾಗಿ ಸಿನಿಮಾರಂಗವೇ ಸ್ಥಗಿತಗೊಂಡಿದೆ. ಹಾಗಾಗಿ ಬರೋಬ್ಬರಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್​ ಇನ್ನು ಕೆಲವೇ ದಿನಗಳಲ್ಲಿ ನೆಲಕಚ್ಚಲಿದೆ.
ಮುಂಬೈನ ಫಿಲಂ ಸಿಟಿಯಲ್ಲಿ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ, ಆಲಿಯಾ ಭಟ್​ ನಾಯಕಿಯಾಗಿ ನಟಿಸಲಿರುವ ‘ಗಂಗೂಬಾಯಿ..’ ಚಿತ್ರದ ಸೆಟ್​ ಹಾಕಲಾಗಿದೆ. ಕರೊನಾ ಇನ್ನೇನು ಮುಗಿಯುತ್ತದೆ. ಮುಗಿದ ಬಳಿಕ ಶೂಟಿಂಗ್​ ಶುರುಮಾಡಿದರಾಯಿತು ಎಂದು ಚಿತ್ರತಂಡ ಪ್ಲ್ಯಾನ್​ ರೂಪಿಸಿತ್ತು. ಆದರೆ, ಲಾಕ್​ಡೌನ್​ ಮತ್ತೆ ಮುಂದೂಡಿಕೆ ಆಗಿರುವುದು ಚಿತ್ರತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂದಿನ ದಿನಗಳಲ್ಲಿ ಮಳೆಗಾಲ ಶುರುವಾಗುವುದರಿಂದ ಚಿತ್ರೀಕರಣಕ್ಕೆ ಅಡ್ಡಿಯುಂಟಾಗಲಿದೆ.
ವಿಪರ್ಯಾಸ ಏನೆಂದರೆ, ಸಂಜಯ್​ ಲೀಲಾ ಬನ್ಸಾಲಿ ಇಲ್ಲಿಯವರೆಗೂ ಹತ್ತಾರು ಸಿನಿಮಾಗಳನ್ನು ಮಾಡಿದ್ದಾರೆ. ಅವರ ಪ್ರತಿ ಸಿನಿಮಾಗಳಲ್ಲಿ ಸೆಟ್​ಗಳೇ ಒಂದು ಪಾತ್ರವೆಂಬಂತೆ ಗೋಚರವಾಗುತ್ತದೆ. ಬಾಜಿರಾವ್​ ಮಸ್ತಾನಿ, ಪದ್ಮಾವತ್​ಗಳಲ್ಲಿ ಸೆಟ್​ಗಳೇ ಕಣ್ಮನ ಸೆಳೆಯುತ್ತವೆ. ಆ ಎಲ್ಲ ಸಿನಿಮಾಗಳ ಸೆಟ್​ಗಿಂತ ಹೆಚ್ಚಿನ ಶ್ರಮವಹಿಸಿ ಗಂಗೂಬಾಯಿ ಚಿತ್ರದ ಸೆಟ್​ ನಿರ್ಮಾಣ ಮಾಡಲಾಗಿತ್ತಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net