72 ಕೋಟಿ ರೂ. ಆಸ್ತಿ ಸಂಜಯ್​ ದತ್​ಗೆ ಕೊಡಿ​! ಮೃತ ಅಭಿಮಾನಿಯ​ ಕಡೆ ಆಸೆ ನಿಜವೇ? ಹೊರಬಿತ್ತು ಅಸಲಿ ಸಂಗತಿ | Sanjay Dutt

ವಿಜಯವಾಣಿ (97)
Published on

Sanjay Dutt: ಬಾಲಿವುಡ್​ನ ಅಂಗಳದಲ್ಲಿ ತಮ್ಮದೇ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಹಿರಿಯ ನಟ ಸಂಜಯ್ ದತ್​, ತಮ್ಮ ಜೀವನದಲ್ಲಿ ನಡೆದ ಶಾಕಿಂಗ್ ಹಾಗೂ ವಿಚಿತ್ರ ಘಟನೆ ಕುರಿತು ಕಡೆಗೂ ಅಸಲಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

2018ರ ಘಟನೆ

'ಕರ್ಲಿ ಟೇಲ್ಸ್'​ ಸಂದರ್ಶನದಲ್ಲಿ ಭಾಗಿಯಾಗಿ, ಹಲವು ಕುತೂಹಕಾರಿ ವಿಷಯಗಳನ್ನು ಸಂಜಯ್ ಹಂಚಿಕೊಂಡರು. ಈ ವೇಳೆ 2018ರಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ವಿಚಾರವೊಂದರ ಕುರಿತು ಪ್ರತಿಕ್ರಿಯಿಸಿದ ನಟ, "62 ವರ್ಷ ವಯಸ್ಸಿನ ಅಭಿಮಾನಿಯೊಬ್ಬರು, ತೀರ ಅನಾರೋಗ್ಯ ಸಮಸ್ಯೆಯಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇನ್ನೇನು ತಾನು ಸಾವಿಗೆ ಹತ್ತಿರವಾಗುತ್ತಿದ್ದೀನಿ ಎಂಬುದು ತಿಳಿಯುತ್ತಿದ್ದಂತೆ, ಆಕೆ ತನ್ನ 72 ಕೋಟಿ ರೂ. ಮೌಲ್ಯದ ತೋಟವನ್ನು ನನ್ನ ಹೆಸರಿಗೆ ಬರೆದಿಟ್ಟಿದ್ದರು" ಎಂದು ಹೇಳಿದ್ದಾರೆ.

"ಈ ಘಟನೆ 2018ರಲ್ಲಿ ನಡೆದಿದ್ದು. ಮೃತ ಅಭಿಮಾನಿ ಹೆಸರು ನಿಶಾ ಪಾಟೀಲ್. ಅವರಿಗೆ ಆಗಲೇ 62 ವಯಸ್ಸಾಗಿತ್ತು. ನನ್ನ ಮೇಲಿನ ಅಪಾರವಾದ ಪ್ರೀತಿ, ನಂಬಿಕೆಯಿಂದ ಅವರು ತಮ್ಮ 72 ಕೋಟಿ ರೂ. ಮೌಲ್ಯದ ಎಸ್ಟೇಟ್​ ಅನ್ನು ನನಗೆ ಕೊಡಬೇಕು ಎಂದು ನಿರ್ಧರಿಸಿದ್ದರು. ​ಇದಕ್ಕೆ ಸಂಬಂಧಿಸಿದಂತೆ ಅದಾಗಲೇ ಅವರು ತಮ್ಮ ಹಣವಿರುವ ಬ್ಯಾಂಕಿನ ಸಿಬ್ಬಂದಿಗೂ ಈ ಬಗ್ಗೆ ತಿಳಿಸಿದ್ದರಂತೆ. ನಾನು ಮೃತಪಟ್ಟ ಮರುಕ್ಷಣವೇ ನನ್ನ ಅಷ್ಟೂ ಆಸ್ತಿಯನ್ನು ಸಂಜಯ್​ ದತ್​ ಅವರ ಖಾತೆಗೆ ವರ್ಗಾಯಿಸಬೇಕು ಎಂದಿದ್ದರು. ಆದರೆ, ನಾನು ಅದ್ಯಾವುದನ್ನು ಸ್ವೀಕರಿಸಲಿಲ್ಲ. ಬದಲಿಗೆ ಅವರ ಕುಟುಂಬಸ್ಥರಿಗೆ ಹಿಂತಿರುಗಿಸಿದೆ" ಎಂದರು.

ಸಂಜಯ್ ದತ್​​ ಮುಂಬರುವ ಸಿನಿಮಾ

ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 'ಭೂತ್ನಿ' ಮತ್ತು 'ಹೌಸ್‌ಫುಲ್ 5' ಸಿನಿಮಾಗಳಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಸಂಜಯ್ ದತ್​​, ಇದೇ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿರುವ ಬಾಲಕೃಷ್ಣ ಅಭಿನಯದ ತೆಲುಗು ಚಿತ್ರ ಅಖಂಡ 2 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net