

Stray dogs; ಬೀದಿ ನಾಯಿಗಳ ದಾಳಿ ಮತ್ತು ಅದರಿಂದ ಉಂಟಾಗುವ ಸಾವುನೋವುಗಳ ಕುರಿತು ಇಂದು (ಜು.28) ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ಪ್ರಾರಂಭಿಸಿದ್ದು, ಪರಿಸ್ಥಿತಿಯನ್ನು ಆತಂಕಕಾರಿ ಎಂದು ಬಣ್ಣಿಸಿದೆ.
2024 ರಲ್ಲಿ ಭಾರತದಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 54 ಶಂಕಿತ ಮಾನವ ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಕಳೆದ ವಾರ ತಿಳಿಸಿದೆ. ಮಾಹಿತಿಯ ಪ್ರಕಾರ, ಒಟ್ಟು ನಾಯಿ ಕಡಿತ ಪ್ರಕರಣಗಳ ಸಂಖ್ಯೆ 37,17,336 ಆಗಿವೆ.
ಈ ಸುದ್ದಿಯು ಕೆಲವು ಆತಂಕಕಾರಿ ಮತ್ತು ಗೊಂದಲದ ಸಂಗತಿಗಳನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಹೇಳಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರಶಗಳಲ್ಲಿ ನಾಯಿಗಳ ದಾಳಿಯ ದಿನನಿತ್ಯದ ಘಟನೆಗಳು ದಾಖಲಾಗುತ್ತಿವೆ. ರೇಬೀಸ್ ಸೋಂಕುಗಳು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಮೇಲೆ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಹೇಳಿದೆ. "ಈ ಸುದ್ದಿಯನ್ನು ನಾವು ಸ್ವಯಂಪ್ರೇರಿತವಾಗಿ ಪರಿಗಣಿಸುತ್ತೇವೆ" ಎಂದು ಪೀಠವು ತಿಳಿಸಿದೆ.
(ಏಜೆನ್ಸೀಸ್)
ದೇಶಾದ್ಯಂತ ಬೀದಿ ನಾಯಿಗಳಿಗೆ ಆಶ್ರಯ ತಾಣಗಳನ್ನು ನಿರ್ಮಿಸಲು ಹೊಸ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಬೇಕೆಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ. ಬೀದಿಯಲ್ಲಿರುವ ನಾಯಿಗಳನ್ನು ಸ್ಥಳಾಂತರಿಸಿ, ಅವುಗಳಿಗೆ ಚಿಕಿತ್ಸೆ ನೀಡಿ, ಲಸಿಕೆ ಹಾಕಿಸಿ ಮತ್ತು ಸುರಕ್ಷಿತ ಆಶ್ರಯದಲ್ಲಿ ಇರಿಸಿ ಎಂದು ಅವರು ಹೇಳಿದ್ದು, ನಾವು ದತ್ತು ಸ್ವೀಕಾರವನ್ನು ಹೆಚ್ಚಿಸಬೇಕು, ಆದರೆ ಬೀದಿ ನಾಯಿಗಳು ಬೀದಿಗಳಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ.