1993ರ ಬಾಂಬ್​ ಬ್ಲಾಸ್ಟ್​​​ ಕುರಿತು ಸಂಜು ಹೇಳಿದ್ದು ನನಗಿನ್ನು ನೆನಪಿದೆ; ನಟ ಶಿವಾಸಿ ಸತಮ್​​​ ಹೇಳಿಕೆ ವೈರಲ್​​ | Sanjay Dutt

Untitled-design-2024-10-05T185154.299
Published on

ಮುಂಬೈ: ಬಾಲಿವುಡ್​ ನಟ ಶಿವಾಜಿ ಸತಮ್​​ ಅವರ ಕುರಿತ ಪರಿಚಯದ ಅಗತ್ಯವಿಲ್ಲ. ಸಿಐಡಿಯಲ್ಲಿ ಎಸಿಪಿ ಪ್ರದ್ಯುಮನ್​ ಎಂದೇ ಖ್ಯಾತಿ ಪಡೆದ ಈ ನಟ ಎಲ್ಲರಿಗೂ ಚಿರಪರಿಚಿತವೇ. ಶಿವಾಜಿ ಸತಮ್​ ಅವರು 1993ರ ಮುಂಬೈ ಸ್ಫೋಟದ ಪ್ರಕರಣದಲ್ಲಿ ಆರೋಪಿಯಾದ ಸಂಜಯ್​ ದತ್(Sanjay Dutt)​​​ ಅವರು ಪ್ರಕರಣದ ಕುರಿತು ತಮ್ಮ ಹತಾಶೆಯನ್ನು ಹೇಗೆ ಹೇಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಿವಾಜಿ ಸತಮ್​ ಅವರು, ಸಂಜಯ್​ ದತ್​ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋಪದಿಂದ ತೆರವುಗೊಂಡರು. ಆದರೆ ಟಾಡಾ ನ್ಯಾಯಾಲಯವು 2007ರಲ್ಲಿ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು ಎಂದು ಹೇಳಿದರು.

ಬಳಿಕ ಸಿನಿಮಾ ಚಿತ್ರೀಕರಣ ಬಗ್ಗೆ ಮಾತನಾಡಿದ ಅವರು, ಸಂಜಯ್ ದತ್ ಅವರನ್ನು ಒಮ್ಮೆ ನೋಡಲೇಬೇಕು ಎಂಬ ಆಸೆಯಿರುವ ಮಗಳ ತಂದೆಯಾಗಿ ನಟಿಸಿದ್ದೇನೆ. ಸಂಜು ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಹಗಲಿನಲ್ಲಿ ನ್ಯಾಯಾಲಯದ ವಿಚಾರಣೆಗಳನ್ನು ಮುಗಿಸಿದ ನಂತರ ಅವರು ರಾತ್ರಿ 2 ಗಂಟೆಗೆ ದೃಶ್ಯವನ್ನು ಚಿತ್ರೀಕರಿಸಲು ಸೆಟ್‌ಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಇನ್ನು ವಾಸ್ತವ್​ ಚಿತ್ರದ ಶೂಟಿಂಗ್​ ಸಮಯದಲ್ಲಿ ಶಸ್ತ್ರಾಸ್ತ್ರ ಇರುವ ಬ್ಯಾಗ ಅವರ ಬಳಿ ಇದ್ದಂರಹ ಸಮಯದಲ್ಲಿನ ಅವರ ಅಸಹಾಯಕತೆ ಬಗ್ಗೆ ಹೇಳಿದ್ದರು. ಶಿವಾ ಅಬ್ ಕ್ಯಾ ಕರೇ ಯಾರ್, ಯೇ ಬ್ಯಾಗ್ ಆಯಾ, ಮೈನ್ ಫಾಸ್ ಗಯಾ' ಎಂದು ಹೇಳುತ್ತಿದ್ದದ್ದು ನನಗೆ ನೆನಪಿದೆ. ಅದಕ್ಕೆ ನಾನು ಉತ್ತರಿಸಿ, 'ಬಾಬಾ ಕುಚ್ ನಹೀ ಹೋಗಾ, ತೂ ಐಸೇ ಹೆ ರೆಹನಾ ' ಎಂದು ಹೇಳುತ್ತಿದ್ದೆ ಎಂದು ಹೇಳಿದರು. ಇಬ್ಬರು ನಾಲ್ಕೈದು ಸಿನಿಮಾ ಮಾಡಿದೆವು, ಸಂಜಯ್​​ ದತ್​​ ಅದ್ಭುತ ವ್ಯಕ್ತಿ ಎಂದು ತಿಳಿಸಿದರು.

ಇದೇ ಸಂದರ್ಶನದಲ್ಲಿ ಸಂಜಯ್​ ದತ್​ ಅವರೊಂದಿಗಿನ ಮತ್ತೊಂದು ಘಟನೆಯನ್ನು ತಿಳಿಸಿದ್ದಾರೆ. ಸಂಜು ಒಮ್ಮೆ ನಾನ್​ ವೆಜ್​ ಮಾಡುತ್ತಿರುವುದಾಗಿ ಗೆಳೆಯರಿಗೆ ಕರೆ ಮಾಡಿ ಅವನ ಸ್ಥಳಕ್ಕೆ ಕರೆಸಿಕೊಂಡ. ಆ ಸಮಯದಲ್ಲಿ ಸಂಜಯ್​ ಸೆಲ್​ ಫೋನ್​ ಬಳಸುತ್ತಿದ್ದರು. ಅದು ಚಿಕ್ಕದಾಗಿ ನೋಡಲು ಸ್ಮಾರ್ಟ್​ ಆಗಿ ಕಾಣುತಿತ್ತು. ನನ್ನ ಗಮನ ಸೆಳೆದ ಸೆಲ್​ ಫೋನ್​ ಬಗ್ಗೆ ಕಾಂಪ್ಲಿಮೆಂಟ್​ ನೀಡಿದೆ. ಊಟವೆಲ್ಲಾ ಮುಗಿದ ಬಳಿಕ ಸಂಜು ಆ ಫೋನ್​ನಿಂದ ಸಿಮ್​ ತೆಗೆದು ನನ್ನ ಕೈಗಿಟ್ಟು ಇದನ್ನು ನೀನು ಉಪಯೋಗಿಸು, ನನ್ನ ಬಳಿ ಮತ್ತೊಂದು ಇದೇ ರೀತಿಯ ಸೆಲ್​ ಫೋನ್​ ಇದೆ ಎಂದು ಹೇಳಿದ ಎಂದು ವಿವರಿಸಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net