More

    ಇಂದು ಮುನ್ನಾಭಾಯಿ ಮದುವೆ ವಾರ್ಷಿಕೋತ್ಸವ; ಜೋಡಿಯ ವಿಷ್​ಗೆ ಮನಸೋಲದವರಿಲ್ಲ…

    ಮುಂಬೈ: ಬಾಲಿವುಡ್​ನ ಮುನ್ನಾಭಾಯಿ ಸಂಜಯ್​ ದತ್​, ಮಾನ್ಯತಾರೊಂದಿಗೆ ಮದುವೆಯಾಗಿ ಇಂದಿಗೆ 13 ವರ್ಷಗಳು ತುಂಬಿವೆ. ಈ ಸುಭ ಸಂದರ್ಭದಲ್ಲಿ ಗಂಡ ಹೆಂಡತಿ ಒಬ್ಬರಿಗೊಬ್ಬರು ಹೇಗೆ ವಿಷ್​ ಮಾಡಿಕೊಂಡಿದ್ದಾರೆ ಎಂದು ನೋಡಿದರೆ ನಿಮಗೂ ಒಮ್ಮೆಗೆ ವಾವ್​ ಎನಿಸುವುದು ಗ್ಯಾರಂಟಿ.

    ಸಂಜಯ್​ ದತ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪ್ರೀತಿಯ ಪತ್ನಿಗೆ ವಿಷ್​ ಮಾಡಿದ್ದಾರೆ. 11/02/2008 ಆಗ ನಾನು ನಿನ್ನ ಪ್ರೀತಿಸಿದ್ದೆ. ಈಗ ಅದಕ್ಕೂ ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಾನ್ಯತಾ ಕ್ಯಾಮೆರಾ ನೋಡುತ್ತಿದ್ದರೆ, ಪಕ್ಕದಲ್ಲಿ ಅಂಟಿಕೊಂಡು ನಿಂತ ಸಂಜಯ್​ ಮಾನ್ಯತಾಳನ್ನು ನೋಡಿ ನಗುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

    ಮಾನ್ಯತಾ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಗಂಡನಿಗೆ ವಿಷ್​ ಮಾಡಿದ್ದಾರೆ. : “ಪರಸ್ಪರರೊಳಗಿನ ಕತ್ತಲೆ ಮತ್ತು ಬೆಳಕನ್ನು ಸಂಪೂರ್ಣವಾಗಿ ಸ್ವೀಕರಿಸುವ ಮತ್ತೊಂದು ವರ್ಷ … ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಇನ್ನೊಂದು ವರ್ಷ.. ಪೂರ್ತಿ ಪ್ರಪಂಚದಲ್ಲಿ ನನ್ನ ಅತ್ಯುತ್ತಮ ಗ್ರಿಪ್​ಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಅವರು ಬರೆದಿಕೊಂಡಿದ್ದಾರೆ. ದಂಪತಿಯ ಮಗಳು ತ್ರಿಷಾಲಾ ದತ್​ ಕೂಡ ಅಪ್ಪ ಅಮ್ಮನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್​)

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ವಾಲೆಂಟೈನ್ಸ್​ ಮುಂಚೆ ಹೀಗೊಂದು ದಿನ…. ‘ಪ್ರಾಮಿಸ್ ಡೇ’ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts