ಮುಂಬೈ: ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೊಲ್ಕತಾ ಪೊಲೀಸರು ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಸಂಜಯ್ ಚಕ್ರವರ್ತಿ(Sanjay Chakraborty) ಅವರನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ(ನವೆಂಬರ್ 15) ತಿಳಿಸಿದ್ದಾರೆ. ಕೊಲ್ಕತಾದ ಚಾರು ಮಾರ್ಕೆಟ್ ಪ್ರದೇಶದಲ್ಲಿ ತನ್ನ ಗಾಯನ ಸಂಸ್ಥೆಯಲ್ಲಿನ ತರಗತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಈ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: Sri Lanka Election Result | ಎನ್ಪಿಪಿಗೆ ಒಲಿದ ಜಯ; ಸಂಸತ್ತಿನಲ್ಲಿ ಬಹುಮತ ಪಡೆದ ಅನುರ ಕುಮಾರ ಡಿಸ್ಸಾನಾಯಕೆ ನೇತೃತ್ವದ ಪಕ್ಷ
ಆರೋಪಿಯನ್ನು ಮುಂಬೈನಿಂದ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕೊಲ್ಕತಾಕ್ಕೆ ಕರೆತಂದು ನಗರದ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯ ಅವರನ್ನು ನವೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಸಂಜಯ್ ಚಕ್ರವರ್ತಿ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ ಪಂಡಿತ್ ಅಜಯ್ ಚಕ್ರವರ್ತಿ ಅವರ ಕಿರಿಯ ಸಹೋದರ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಆರೋಪಗಳನ್ನು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಆರೋಪಿಯ ವಿರುದ್ಧ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರ ಪಾಲಕರು ದೂರು ದಾಖಲಿಸಿದ್ದರು. ಅದರಲ್ಲಿ ಚಕ್ರವರ್ತಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹೇಳಲಾಯಿತು. ಆ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರಯ, ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಕೊಲ್ಕತಾ ತೊರೆದು ಮುಂಬೈನಲ್ಲಿ ವಾಸ ಆರಂಭಿಸಿದ್ದಾರೆ. ಮುಂಬೈ ಅಧಿಕಾರಿಗಳ ಸಹಾಯದಿಂದ ಕೊಲ್ಕತಾ ಪೊಲೀಸರು ಸಂಜಯ್‌ನನ್ನು ಆತನ ಸ್ನೇಹಿತನ ಮನೆಯಿಂದ ಬಂಧಿಸಿದ್ದಾರೆ ಎನ್ನಲಾಗಿದೆ.
ಆರಂಭಿಕ ದೂರಿನ ಪ್ರಕಾರ ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿರುವ ಬೆಲ್ಗೋರಿಯಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಕುಟುಂಬವು ಈ ಘಟನೆಯನ್ನು ಮೊದಲು ವರದಿ ಮಾಡಿದೆ. ಬ್ಯಾರಕ್‌ಪೋರ್ ಸಿಟಿ ಪೊಲೀಸರು ದಾಖಲಿಸಿದ ಶೂನ್ಯ ಎಫ್‌ಐಆರ್ ಮೂಲಕ ಪ್ರಕರಣವನ್ನು ಕೊಲ್ಕತಾ ಪೊಲೀಸರ ಚಾರು ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಆರಂಭದಲ್ಲಿ ದೂರು ದಾಖಲಿಸಿದ ನ್ಯಾಯವ್ಯಾಪ್ತಿಯ ಹೊರಗೆ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಸಂತ್ರಸ್ತೆಯನ್ನು ಆಕೆಯ ಪಾಲಕರು ಮಾನಸಿಕ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದ ನಂತರ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಯ ಸಮಯದಲ್ಲಿ ಸಂತ್ರಸ್ತೆಯು ತನ್ನ ವೈದ್ಯರ ಮೊದಲ ಬಾರಿಗೆ ಸಂಪೂರ್ಣ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಬಳಿಕ ಆಕೆಯ ಪಾಲಕರಿಗೆ ವಿಚಾರ ತಿಳಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅಪರಾಧ ಸಂಭವಿಸಿದ ಇನ್‌ಸ್ಟಿಟ್ಯೂಟ್‌ನಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರೀಕ್ಷಿಸಲು ಮತ್ತು ಆ ಸಮಯದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು ಮತ್ತು ಇತರರೊಂದಿಗೆ ಮಾತನಾಡಲು ಪೊಲೀಸರು ಯೋಜಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.(ಏಜೆನ್ಸೀಸ್)
ವೈದ್ಯರಿಗೆ 7 ಬಾರಿ ಇರಿದು ಪೊಲೀಸರ ಅತಿಥಿಯಾದ ಪೇಷಂಟ್ ಮಗ; ಕಾರಣ ಹೀಗಿದೆ.. |Hospital