More

    ಟ್ರೋಲ್​ಗಳಿಗೆ ದಿಟ್ಟ ಉತ್ತರ ನೀಡಿದ ಸಾನಿಯಾ ತಂಗಿ ಅನಮ್​ ಮಿರ್ಜಾ

    ಹೈದರಾಬಾದ್​: ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಅವರ ತಂಗಿ ಅನಮ್​ ಮಿರ್ಜಾ ಕಳೆದ ವರ್ಷ ಡಿಸೆಂಬರ್​ನಲ್ಲಿ ಟೀಮ್​ ಇಂಡಿಯಾ ಮಾಜಿ ನಾಯಕ ಮೊಹಮದ್​ ಅಜರುದ್ದೀನ್​ ಪುತ್ರ ಮೊಹಮದ್​ ಅಸದುದ್ದೀನ್​ ಅವರನ್ನು ವಿವಾಹವಾಗಿದ್ದರು. ಆ ಸಮಯದ ನೆನಪುಗಳನ್ನು ಒಳಗೊಂಡ ವಿಡಿಯೋ ಮತ್ತು ಚಿತ್ರಗಳನ್ನು ಅನಮ್​ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿವಾಹದ ಸಮಯದಲ್ಲಿ ಸಾನಿಯಾ ಮಿರ್ಜಾ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್​ ಮಲಿಕ್​ ಗೈರು ಹಾಜರಾಗಿದ್ದ ಬಗ್ಗೆ ನೆಟ್ಟಿಗರಿಂದ ಅನಮ್​ ಟ್ರೋಲ್​ಗಳನ್ನು ಎದುರಿಸಿದ್ದರು. ಇದಕ್ಕೀಗ ಅನಮ್​ ದಿಟ್ಟ ಉತ್ತರವನ್ನೇ ನೀಡಿದ್ದಾರೆ.

    ಅನಮ್​ ವಿವಾಹದ ನೆನಪುಗಳ ವಿಡಿಯೋವನ್ನು ಪ್ರಕಟಿಸಿದ ಬೆನ್ನಲ್ಲೇ ನೆಟ್ಟಿಗರು, ಶೋಯಿಬ್​ ಮಲಿಕ್​ ಯಾಕೆ ವಿವಾಹಕ್ಕೆ ಹಾಜರಾಗಿರಲಿಲ್ಲ ಎಂಬ ಬಗ್ಗೆ ವಿವಿಧ ಪ್ರಶ್ನೆಗಳ ಸುರಿಮಳೆ ಹರಿಸಿದ್ದರು. ಅನಮ್​ ಅವರ ಭಾವ ವಿವಾಹದ ಯಾವುದೇ ಚಿತ್ರ ಮತ್ತು ವಿಡಿಯೋಗಳಲ್ಲಿ ಕಾಣಿಸುತ್ತಿರಲಿಲ್ಲ. ಜಿಜು ಯಾಕೆ ಬರಲಿಲ್ಲ ಎಂಬ ಬಗ್ಗೆ ನೆಟ್ಟಿಗರಿಂದ ಸತತ ಪ್ರಶ್ನೆಗಳು ಎದುರಾದ ಬೆನ್ನಲ್ಲೇ ಅನಮ್​ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ, ಶೋಯಿಬ್​ ಮಲಿಕ್​ ಗೈರು ಹಾಜರಿಯನ್ನು ಸಮರ್ಥಿಸುವ ಉತ್ತರವನ್ನು ಪ್ರಕಟಿಸಿದ್ದರು.

    ಇದನ್ನೂ ಓದಿ: ಐಪಿಎಲ್​ಗೆ ಮುನ್ನ ಗುಡ್​ನ್ಯೂಸ್​ ಪಡೆದ ಫಾಫ್​ ಡು ಪ್ಲೆಸಿಸ್​

    ‘ನಾವೆಲ್ಲರೂ ವಿವಾಹದಂದು ಶೋಯಿಬ್​ ಮಲಿಕ್​ ಅವರನ್ನು ಮಿಸ್​ ಮಾಡಿಕೊಂಡೆವು. ಹಲವಾರು ಕಾರಣಗಳಿಂದಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ವಿವಾಹದ ವೇಳೆ ಅವರಿರಲಿಲ್ಲ ಎಂಬ ಮಾತ್ರಕ್ಕೆ ನಮಗೆ ದ್ವೇಷದ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸಿ. ಅವರು ವಿವಾಹಕ್ಕೆ ಹಾಜರಾಗಲು ಸಾಧ್ಯವಾಗುತ್ತಿದ್ದರೆ, ಖಂಡಿತವಾಗಿಯೂ ಇಲ್ಲಿನ ಚಿತ್ರಗಳು ಮತ್ತು ವಿಡಿಯೋಗಳಲ್ಲೂ ಅವರು ಇರುತ್ತಿದ್ದರು. ರಿಲ್ಯಾಕ್ಸ್​’ ಎಂದು ಅನಮ್​ ಮಿರ್ಜಾ ಬರೆದುಕೊಂಡಿದ್ದಾರೆ.

    ಟ್ರೋಲ್​ಗಳಿಗೆ ದಿಟ್ಟ ಉತ್ತರ ನೀಡಿದ ಸಾನಿಯಾ ತಂಗಿ ಅನಮ್​ ಮಿರ್ಜಾ

    25 ವರ್ಷದ ಅನಮ್​ ಮಿರ್ಜಾ 2016ರಲ್ಲಿ ಅಕ್ಬರ್​ ರಶೀದ್​ ಎಂಬವರನ್ನು ವಿವಾಹವಾಗಿದ್ದರು. ಆದರೆ ಬಳಿಕ 2018ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ 2019ರ ಕೊನೆಯಲ್ಲಿ ಅಜರುದ್ದೀನ್​ ಪುತ್ರನ ಜತೆಗೆ 2ನೇ ವಿವಾಹವಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts