More

    ಐಪಿಎಲ್​ಗೆ ಮುನ್ನ ಗುಡ್​ನ್ಯೂಸ್​ ಪಡೆದ ಫಾಫ್​ ಡು ಪ್ಲೆಸಿಸ್​

    ಕೇಪ್​ಟೌನ್​: ಐಪಿಎಲ್​ನಲ್ಲಿ ಬಲಿಷ್ಠ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಪರ ಆಡಲು ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟ್ಸ್​ಮನ್​ ಫಾಫ್​ ಡು ಪ್ಲೆಸಿಸ್​ ಗುರುವಾರ ಗುಡ್​ನ್ಯೂಸ್​ ಪಡೆದಿದ್ದಾರೆ. ಅವರ ಪತ್ನಿ ಇಮಾರಿ ವಿಸೆರ್​ ಕಳೆದ ಮಂಗಳವಾರ 2ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸಂಭ್ರಮಿಸಿ ಪ್ಲೆಸಿಸ್​ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶವನ್ನೂ ಪ್ರಕಟಿಸಿದ್ದಾರೆ.

    ದೀರ್ಘಕಾಲದ ಗೆಳತಿ ಇಮಾರಿ ವಿಸೆರ್​ ಅವರನ್ನು 2013ರಲ್ಲಿ ವರಿಸಿದ್ದ ಫಾಫ್​ ಡು ಪ್ಲೆಸಿಸ್​, 2017ರಲ್ಲಿ ಅಮೇಲಿ ಎಂಬ ಮೊದಲ ಹೆಣ್ಣು ಮಗುವಿನ ತಂದೆಯಾಗಿದ್ದರು. 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಈ ವಾರ ದಕ್ಷಿಣ ಆಫ್ರಿಕಾ ತಂಡದ ತರಬೇತಿ ಶಿಬಿರದಿಂದ ಹೊರಗುಳಿದಿದ್ದ ಫಾಫ್​ ಡು ಪ್ಲೆಸಿಸ್​, ಐಪಿಎಲ್​ ಟೂರ್ನಿಗೆ ಪೂರ್ವಭಾವಿಯಾಗಿ ಸೆಪ್ಟೆಂಬರ್​ 1ರಂದು ದುಬೈನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಯುಎಇಯಲ್ಲೂ ಕರೊನಾ ಪ್ರಕರಣ ಏರಿಕೆ, ಐಪಿಎಲ್​ಗೆ ಆತಂಕ!

    ಹೊಸ ಜೀವನದ ಪವಾಡ ಈ ಜಗತ್ತಿಗೆ ಆಗಮಿಸಿದೆ. ನಮ್ಮದು ಎಷ್ಟು ಅಮೋಘ ಸೃಷ್ಟಿ ಎಂಬುದು ಇದರಿಂದ ಮನವರಿಕೆಯಾಗಿದೆ ಎಂದಿರುವ ಫಾಫ್​ ಡು ಪ್ಲೆಸಿಸ್​, 2ನೇ ಮಗುವಿಗೆ ಜೋಯಿ ಎಂದು ನಾಮಕರಣ ಮಾಡಿರುವುದನ್ನೂ ತಿಳಿಸಿದ್ದಾರೆ. ನಾವು ನಿನಗೆ ಬೇಷರತ್​ ಪ್ರೀತಿ ನೀಡುವೆವು ಮತ್ತು ನಾನು ಹೊಂದಿರುವ ಎಲ್ಲವನ್ನೂ ನೀಡಿ ನಿನ್ನನ್ನು ಸಲಹುವೆ ಎಂದು ಪ್ಲೆಸಿಸ್​ ಬರೆದುಕೊಂಡಿದ್ದಾರೆ.

    ಪ್ಲೆಸಿಸ್​ ಜೆರ್ಸಿ ಸಂಖ್ಯೆಯ ದಿನಾಂಕದಂದೇ ಜನನ!
    2ನೇ ಪುತ್ರಿ ತಂದೆಯ ಜೆರ್ಸಿ ಸಂಖ್ಯೆಯ (18) ದಿನಾಂಕದಂದೇ ಜನಿಸಿರುವ ವಿಶೇಷತೆಯನ್ನು ಫಾಫ್ ಡು ಪ್ಲೆಸಿಸ್​ ಪತ್ನಿ ಇಮಾರಿ ವಿಸೆರ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ಲೆಸಿಸ್​ ದಕ್ಷಿಣ ಆಫ್ರಿಕಾ ಪರ 18 ಸಂಖ್ಯೆಯ ಜೆರ್ಸಿ ನಂಬರ್​ನೊಂದಿಗೆ ಆಡುತ್ತಾರೆ. 2011ರಿಂದ ಚೆನ್ನೈ ಸೂಪರ್​ಕಿಂಗ್ಸ್ ತಂಡದ ಭಾಗವಾಗಿರುವ ಪ್ಲೆಸಿಸ್​ ತಂಡದ ಪರ 71 ಪಂದ್ಯಗಳಲ್ಲಿ 1,853 ರನ್​ ಬಾರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts