More

    ನಾನು ಮುಗಿಸಿದ್ದೇನೆ! ಡಿವೋರ್ಸ್​ ವದಂತಿಗೆ ಮತ್ತೆ ಪುಷ್ಠಿ ನೀಡಿದ ಸಾನಿಯಾ ಮಿರ್ಜಾ ನಿಗೂಢ ಪೋಸ್ಟ್​

    ದುಬೈ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು. ಆ ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಸ್ಟಾರ್​ ದಂಪತಿಯ ಡಿವೋರ್ಸ್​ ವಿಚಾರ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸಾನಿಯಾ ಮಿರ್ಜಾ ಮಾಡಿರುವ ನಿಗೂಢ ಪೋಸ್ಟ್​.

    ಇತ್ತೀಚೆಗೆ ಸಾನಿಯಾ ಮಿರ್ಜಾ ಪೋಸ್ಟ್​ ಮಾಡಿರುವ ಇನ್​ಸ್ಟಾಗ್ರಾಂ ಸ್ಟೋರಿ ಡಿವೋರ್ಸ್​ ಸಂಗತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಷ್ಟಕ್ಕೂ ಸ್ಟೋರಿಯಲ್ಲಿ ಸಾನಿಯಾ ಏನು ಬರೆದುಕೊಂಡಿದ್ದರು ಅಂದರೆ, “ನಾನೇನಾದರೂ ಸಂವಹನ ಮಾಡುತ್ತಿದ್ದಲ್ಲಿ, ನಾನು ಕಾಳಜಿ ವಹಿಸುತ್ತೇನೆ. ನಾನು ಮೌನವಾಗಿದ್ದಲ್ಲಿ ನಾನು ಮುಗಿಸಿದ್ದೇನೆ” ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಇದೀಗ ಈ ಒಂದು ಸಾಲು ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಇಬ್ಬರು ಡಿವೋರ್ಸ್​ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

    Sania Mirza

    ಬೇರೆ ಬೇರೆ ವಾಸ
    ಮೂಲಗಳ ಪ್ರಕಾರ ಸಾನಿಯಾ ಮತ್ತು ಶೋಯಿಬ್​​ ಬೇರೆ ಬೇರೆ ವಾಸ ಮಾಡುತ್ತಿದ್ದು, ತಮ್ಮ ಮಗ ಇಝಾನ್​ಗೆ ಸಹ ಪಾಲಕರಾಗಿದ್ದಾರೆ ಎಂದು ಹೇಳಲಾಗಿದೆ. ಡಿವೋರ್ಸ್​ ಬಗ್ಗೆ ಸಾಕಷ್ಟು ವದಂತಿಗಳು ಮುನ್ನೆಲೆಗೆ ಬಂದರೂ ಈ ಬಗ್ಗೆ ಅಧಿಕೃತವಾಗಿ ಇಬ್ಬರಿಂದಲೂ ಈವರೆಗೂ ಯಾವುದೇ ಹೇಳಿಕೆ ಬಂದಿಲ್ಲ. ಅಭಿಮಾನಿಗಳು ಕೂಡ ಇಬ್ಬರ ಹೇಳಿಕೆಗಾಗಿ ಕಾಯುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಪೋಸ್ಟ್​ ಹೊರತಾಗಿ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ.

    ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ; ಸಚಿವ ಎಂ.ಬಿ. ಪಾಟೀಲ

    ಇನ್​ಸ್ಟಾಗ್ರಾಂ ಬಯೋ
    ಕೆಲವು ತಿಂಗಳುಗಳ ಹಿಂದೆ ಶೋಯಿಬ್​ ಮಲಿಕ್​ ಅವರ ಇನ್​ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಸಹ ಡಿವೋರ್ಸ್​ ವದಂತಿಗೆ ಪುಷ್ಠಿ ನೀಡಿತು ಮತ್ತು ಡಿವೋರ್ಸ್​ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಈ ಮೊದಲು ಬಯೋದಲ್ಲಿ ಸೂಪರ್​ವುಮ್ಯನ್​ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್​ ಬರೆದುಕೊಂಡಿದ್ದರು. ಆದರೆ, ಅದನ್ನು ತೆಗೆದಿದ್ದಾರೆ. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರುವುದು ಖಚಿತ ಎನ್ನಲಾಗಿತ್ತು.

    shoib mallik

    ಅಂದಹಾಗೆ ಸಾನಿಯಾ ಮತ್ತು ಮಲಿಕ್​, ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿ ಆಟಗಾರರಿಬ್ಬರ ಪ್ರೇಮವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳನ್ನು ಬದಿಗೊತ್ತಿ 2010ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ದಂಪತಿಗೆ ಇಝಾನ್​ ಮಿರ್ಜಾ ಮಲ್ಲಿಕ್ ಹೆಸರಿನ ಮಗನಿದ್ದಾನೆ. ಸದ್ಯ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗ ಇಜಾನ್​ಗೆ ಸಹ-ಪೋಷಕರಾಗಿದ್ದಾರೆ ಎನ್ನಲಾಗುತ್ತಿದೆ.

    ವದಂತಿ ಆರಂಭವಾಗಿದ್ದು ಯಾವಾಗ?
    ಕಳೆದ ವರ್ಷ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. (ಏಜೆನ್ಸೀಸ್​)

    ಶೋಯಿಬ್​ ಇನ್​ಸ್ಟಾಗ್ರಾಂ ಬಯೋ ಸುಳಿವು: ಸಾನಿಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಖಚಿತ?

    ಸಾನಿಯಾ-ಶೋಯಿಬ್​​ ಮಧ್ಯೆ ಆಯೇಶಾ? ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಪಾಕ್​ ಮಾಧ್ಯಮಗಳು!

    ಶೀಘ್ರದಲ್ಲೇ ಸಾನಿಯಾ-ಶೋಯಿಬ್​… ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಉರ್ದುಫ್ಲಿಕ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts