ಕಿವಿ ಚುಚ್ಚಿಸಿಕೊಂಡ Sania Mirza ! ವಿಡಿಯೋ ನೋಡಿ..

Sania Mirza
Published on

ದುಬೈ:  ( Sania Mirza ) ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪತಿ ಶೋಯೆಬ್ ಮಲಿಕ್ ಅವರಿಂದ ಬೇರ್ಪಟ್ಟ ನಂತರ ಒಂಟಿಯಾಗಿದ್ದಾರೆ. ತನ್ನ ಮಗ ಇಜಾನ್ ಮಿರ್ಜಾ ಜತೆ ದುಬೈನಲ್ಲಿ ವಾಸಿಸುತ್ತಿದ್ದಾರೆ.

ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಕೂಡ ಅವರೊಂದಿಗೆ ಮೋಜು ಮಾಡುತ್ತಾರೆ. ಅನಮ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.  ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಕಿವಿ ಚುಚ್ಚಿಸಿಕೊಳ್ಳುವಾಗ ನೋವಿನಿಂದ ಒದ್ದಾಡುತ್ತಿದ್ದಳು. ಇದನ್ನು ಗಮನಿಸಿದ ಸಾನಿಯಾ ಕೂಡಲೇ ತಂಗಿಯ ಕೈ ಹಿಡಿದು ನೋವು ತಗ್ಗಿಸಲು ಯತ್ನಿಸಿದ್ದಾರೆ. ಇವರಿಬ್ಬರ ಜತೆಗೆ ಭಾರತೀಯ ಕ್ರಿಕೆಟಿಗನ ಪತ್ನಿಯೂ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಅನಮ್ ಶೇರ್ ಮಾಡಿರುವ ವಿಡಿಯೋದಲ್ಲಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ಕೂಡ ಇದ್ದಾರೆ. ಸದ್ಯ ದುಬೈನಲ್ಲಿ ನೆಲೆಸಿದ್ದಾಳೆ. ಇತ್ತೀಚೆಗೆ ಮೂವರಿಗೂ ಕಿವಿ ಚುಚ್ಚಿಕೊಂಡಿದೆ. ಶೀತಲ್ ಮತ್ತು ಸಾನಿಯಾ ಹೇಗಾದರೂ ನೋವನ್ನು ಸಹಿಸಿಕೊಂಡರು ಆದರೆ ಅನಮ್ ತುಂಬಾ ಜೋರಾಗಿ ಕಿರುಚಿದರು. ಹಿಂದೆ ನಿಂತಿದ್ದ ಸಾನಿಯಾ ಬೇಗನೇ ಮುಂದೆ ಬಂದು ಅನಮ್ ಕೈಯನ್ನು ಗಟ್ಟಿಯಾಗಿ ಹಿಡಿದು ನೋವು ತಗ್ಗಿಸಲು ಯತ್ನಿಸಿದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಲ್ಲದೇ ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಸಾನಿಯಾ ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರೂ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಸಾನಿಯಾ ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಹಾಗೂ ಪಾರ್ಟಿಗೆ ಶೀತಲ್ ಹಾಜರಾಗುತ್ತಾರೆ. ಅಷ್ಟೇ ಅಲ್ಲ, ರಾಬಿನ್ ಉತ್ತಪ್ಪ ಅವರ ಮಗ ಮತ್ತು ಸಾನಿಯಾ ಮಿರ್ಜಾ ಅವರ ಮಗ ಕೂಡ ಸ್ನೇಹಿತರಾಗಿದ್ದಾರೆ.

ಸಾನಿಯಾ ಜೊತೆಗಿನ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಮದುವೆಯ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ವಾಸಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net