ಇದು ನನ್ನ ಕೊನೆಯ ಸೀಸನ್; ವೃತ್ತಿ ಬದುಕಿಗೆ ವಿದಾಯ ಹೇಳಿದ ಟೆನಿಸ್ ತಾರೆ ಸಾನಿಯಾ!

sania web
Published on

ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾಗವಹಿಸಿದ ಸಾನಿಯಾ ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದರು. ಈ ಸೋಲಿನ ಬಳಿಕ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದಾರೆ.

2022ರ ಟೆನಿಸ್ ಸೀಸನ್ ನನ್ನ ಕೊನೇಯ ಋತುವಾಗಿರಲಿದೆ. ಈ ಋತುವನ್ನು ಸಂಪೂರ್ಣಗೊಳಿಸಿದ ಬಳಿಕ ನಿವೃತ್ತರಾಗುವುದಾಗಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಭಾರತೀಯ ಟೆನಿಸ್ ಲೋಕದ ಸೂಪರ್‌ಸ್ಟಾರ್ ಆಗಿ ಮಿಂಚಿದ ಹೈದರಾಬಾದ್ ಮೂಲದ ಸಾನಿಯಾ, ಭಾರತದ ಪರವಾಗಿ ಅನೇಕ ಗ್ರ್ಯಾಂಡ್‌ ಸ್ಲ್ಯಾಮ್‌ಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಈ ಸಾಧನೆಯಿಂದಾಗಿ ಕೇವಲ ಟೆನಿಸ್ ಲೋಕದ ಸೂಪರ್ ಸ್ಟಾರ್ ಆಗಿ ಮಾತ್ರವೇ ಮೆರೆಯಲಿಲ್ಲ. ತಮ್ಮ ಸೌಂದರ್ಯದಿಂದಲೂ ಸಾನಿಯಾ ಹೆಚ್ಚು ಸದ್ದು ಮಾಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net