More

    ಕೆಂಪೇಗೌಡ ಬಸ್​ ನಿಲ್ದಾಣ, ಕೆಎಂಎಫ್​ ನಿರ್ಮಾಣಕ್ಕೆ ಶ್ರಮಿಸಿದ್ದ ಮುದ್ದಪ್ಪ ಇನ್ನಿಲ್ಲ

    ಬೆಂಗಳೂರು: ಕೆಎಂಎಫ್​(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ)​, ಪಾಂಡವಪುರ ಸಕ್ಕರೆ ಕಾರ್ಖಾನೆ, ಬೆಂಗಳೂರಲ್ಲಿ ಕೆಂಪೇಗೌಡ ಬಸ್​ ನಿಲ್ದಾಣ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಐಎಎಸ್​ ಅಧಿಕಾರಿ ಬಿ.ಎಸ್​. ಮುದ್ದಪ್ಪ ನಿಧನರಾದರು.

    ಮುದ್ದಪ್ಪ ಅವರಿಗೆ 99 ವರ್ಷ ವಯಸ್ಸಾಗಿತ್ತು. ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಮುದ್ದಪ್ಪ ಅವರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೈಸೂರಿನ ಕೆ.ಆರ್​.ನಗರ ಮೂಲದ ಬಳೆ ಸಿದ್ದಲಿಂಗಶೆಟ್ಟಿ ಅವರ ಪುತ್ರರಾದ ಮುದ್ದಪ್ಪ ಕಾನೂನು ಪದವಿ ಪಡೆದು ನಂತರ ಐಎಎಸ್​ ಪಾಸು ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮದ ಜನರಲ್​ ಮ್ಯಾನೇಜರ್​ ಆಗಿದ್ದ ವೇಳೆ ಸಾರಿಗೆ ಸಚಿವರಾಗಿದ್ದ ದೇವರಾಜ ಅರಸು ಅವರ ಒತ್ತಾಸೆಯಂತೆ ಕೆಂಪೇಗೌಡ ಬಸ್​ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದರು. ಗುಂಡೂರಾವ್​ ಸಾರಿಗೆ ಸಚಿವರಾಗಿದ್ದಾಗ ಬಿಎಂಟಿಸಿ ಬಸ್​ ನಿಲ್ದಾಣ ನಿರ್ಮಾಣಕ್ಕೆ ದುಡಿದರು. ಗ್ರಾಹಕ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕರಾಗಿ ಜನತಾ ಬಜಾರ್​ ಪ್ರಾರಂಭಿಸಲು ಕಾರಣಕರ್ತರಾದರು.

    ಕರ್ನಾಟಕ ಡೇರಿ ಡೆವಲಪ್​ಮೆಂಟ್​ ಕಾರ್ಪೋರೇಷನ್​ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮುದ್ದಪ್ಪ ಅವರು ವಿಶ್ವಬ್ಯಾಂಕ್​ನಿಂದ ಸಾಲ ತಂದು ಇಂದಿನ ಕೆಎಂಎಫ್​​ ಬೆಳವಣಿಗೆಯಲ್ಲಿ ಕಾರಣಕರ್ತರಾದರು. ಮೈಸೂರು ಮಹಾನಗರ ಪಾಲಿಕೆಯ ಮೊದಲ ಆಡಳಿತಾಧಿಕಾರಿ ಆಗಿಯೂ ಕಾರ್ಯ ನಿರ್ವಹಿಸಿದರು. ಸಿದ್ಧಗಂಗಾ ಮಠ, ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಡಾ. ಎಂ.ಸಿ. ಮೋದಿ ಟ್ರಸ್ಟ್​, ನಿಜಲಿಂಗಪ್ಪ ಟ್ರಸ್ಟ್​ಗಳಲ್ಲಿ ಸೇವೆ ಸಲ್ಲಿಸಿದ್ದರು.

    ಮುದ್ದಪ್ಪ ಅವರ ಸೇವೆ ಗುರುತಿಸಿ ಅನ್ನಪೂರ್ಣ ಟ್ರಸ್ಟ್​ ‘ರಾಜ್ಯ ಸೇವಾರತ್ನ’ ಎಂಬ ಬಿರುದು ನೀಡಿ ಗೌರವಿಸಿತ್ತು. ಸಿದ್ಧಗಂಗಾ ಮಠದಿಂದ ‘ಸಮಾಜ ಸೇವಾ ಸಂಪನ್ನ’ ಹಾಗೂ ‘ಧರ್ಮನಿಷ್ಠ ಕಾಯಕಯೋಗಿ’ ಬಿರುದು ನೀಡಿ ಗೌರವಿಸಲಾಗಿದೆ. ಚಿತ್ರದುರ್ಗದ ಮುರು ಮಠದಿಂದ ‘ಬಸವಭೂಷಣ’ ಹಾಗೂ ಬೆಂಗಳೂರಿನ ಈಶ್ವರಿ ಮಹಾಮಂಡಲದಿಂದ ‘ಈಶ್ವರ ಶ್ರೀ’ ಬಿರುದು ಮುದ್ದಪ್ಪ ಅವರಿಗೆ ಸಂದಿವೆ.

    ಕಾಳಿ ಮಠದ ಸ್ವಾಮೀಜಿ ಬಂಧನ: ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ತೀವಿ… ನನ್ನ ಹೇಳಿಕೆಗೆ ಈಗಲೂ ಬದ್ಧ…

    ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ

    ದೇವನಹಳ್ಳಿಯ ಬಾಡಿಗೆ ಮನೇಲಿ ಗೃಹಿಣಿ ಜತೆ ಯುವಕ ಆತ್ಮಹತ್ಯೆ: ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬಯಲಾಯ್ತು ಭಯಾನಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts