

ಬಿಗ್ ಬಾಸ್ ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ 2024ರ ವರ್ಷ ದೊಡ್ಮನೆಯ ಸದಸ್ಯರಿಗೆ ಯಾವ ರೀತಿ ಇರುತ್ತದೆ ಎಂದು ವಿವರವಾಗಿ ತಿಳಿಸಿದ್ದಾರೆ. ಸಂಗೀತ ಶೃಂಗೇರಿ ಭವಿಷ್ಯ ಹೇಳಿದ ಸ್ವಾಮೀಜಿ ಸದ್ಯ ಆಕೆಯ ಮದುವೆ ಖಂಡಿತವಾಗಿಯೂ ಆಗುತ್ತದೆ ಎಂದ ಹೇಳಿದ್ದಾರೆ.
ಶೀಘ್ರದಲ್ಲಿ ಪ್ರಸಾರವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ನಾನು ಜೀವನದಲ್ಲಿ ಮದುವೆನೇ ಆಗಲ್ಲ ಎನ್ನುತ್ತಿದ್ದ ಸಂಗೀತಾ ಶೃಂಗೇರಿ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿ, ಮನಸ್ಸಿನ ದುಃಖಗಳನ್ನು ನೀಗಿಸುಯವಂತಹ ಒಬ್ಬ ವ್ಯಕ್ತಿ ಬರಲಿದ್ದಾರೆ. 2024ರಲ್ಲಿ ನಿಮ್ಮ ಬಾಳಲ್ಲಿ ಹೊಸ ಚೈತನ್ಯ ಮೂಡಲಿದೆ. ವೃತ್ತಿಬದುಕಿನಲ್ಲಿ ಏರಿಳಿತಗಳು ಇರುತ್ತದೆ. ಆದರೆ 2025ರಲ್ಲಿ ನಿಮ್ಮ ಮದುವೆ ನಡೆದೇ ನಡೆಯುತ್ತದೆ. ಸಂಗಾತಿ ಬಂದ ಮೇಲೆ ನಿಮ್ಮ ಜೀವನ ಚೆನ್ನಾಗಿ ನಡೆಯುತ್ತದೆ” ಎಂದು ಗುರೂಜಿ ಭವಿಷ್ಯ ಹೇಳಿದ್ದಾರೆ.
ಬಿಗ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಟಾಸ್ಕ್, ಊಟ ಹೀಗೆ ನಾನಾ ವಿಚಾರಗಳಿಗೆ ಸ್ಪರ್ಧಿಗಳು ಕಿತ್ತಾಡುತ್ತಿದ್ದಾರೆ. ಈ ನಡುವೆ ಗುರೂಜಿಯವರ ಈ ವರ್ಷದದ ಕಂಟೆಸ್ಟೆಂಟ್ಗಳ ಭವಿಷ್ಯ ನುಡಿದಿರೋದು ದೊಡ್ಡ ಮಟ್ಟಿನಲ್ಲಿ ಚರ್ಚೆಯಾಗುತ್ತಿದೆ.
ಕಂಟೆಸ್ಟೆಂಟ್ಗಳ ಭವಿಷ್ಯದ ಚರ್ಚೆ ಒಂದೆಡೆಯಾದ್ರೆ, ಈ ಸೀಸನ್ನ ವಿನ್ನರ್ ಯಾರಾಗ ಬಹುದು ಎಂಬ ಚರ್ಚೆಗಳೂ ದೊಡ್ಡ ಮಟ್ಟಿನಲ್ಲಿ ನಡೆಯುತ್ತಿದೆ.