ಎಸ್​ಪಿಬಿ ಪರಿಚಯವೇ ನನ್ನ ಜೀವನಕ್ಕೆ ದೊಡ್ಡ ತಿರುವು: ಸಂಗೀತಾ ಕಟ್ಟಿ

spb sangeetha katti
Published on

ಧಾರವಾಡ: ಸಂಗೀತ ಸ್ವರ ಲೋಕದ ಮಾಂತ್ರಿತ, ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್​ಪಿವಿ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಗಾನ ಗಾರುಡಿಗನ ಬಗ್ಗೆ ಮಾತನಾಡಿದ್ದಾರೆ.

ನಮ್ಮ ಕನ್ನಡ ನಾಡಿಗೆ ಎಸ್‌ಬಿಬಿ ಒಂದು ವರ. ನಮ್ಮ‌ ನಾಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಾಡನ್ನು ಹಾಡಿರುವುದು ಭುವನೇಶ್ವರಿಯ ವರ. ನನ್ನ ಪಾಲಿಗೆ ಅವರು ಗುರು ಶಕ್ತಿ. ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಆದಿ-ಅಂತ್ಯ ಇಲ್ಲ ಎಂದು ಸಂಗೀತಾ ಕಟ್ಟಿ ಭಾವುಕರಾಗಿ ನುಡಿದರು.

ಚಿಕ್ಕ ವಯಸ್ಸಿನಲ್ಲೇ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಬಲ್ಲೆ. ಶಾಲಾ ದಿನಗಳಿಂದಲೇ ನನ್ನ ಹಾಡನ್ನು ಅವರು ಗಮನಿಸಿದ್ದರು. ನನಗೆ ಹಾಡಿನ ವಿವಿಧ ಆಯಾಮ ಗೊತ್ತೇ ಇರಲಿಲ್ಲ. ಅಂತಹ ಸಮಯದಲ್ಲಿ ಅವರು ಪರಿಚಯ ಆಗಿದ್ದು ನನ್ನ ಜೀವನದ ದೊಡ್ಡ ತಿರುವು. ಅವರದ್ದು ಯಾವುದಕ್ಕೂ ನಿಲುಕದ ವ್ಯಕ್ತಿತ್ವ ಎಂದು ಸಂಗೀತಾ ಕಟ್ಟಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net