ಯಕ್ಷದ್ರುವರ ಧ್ವನಿಯಲ್ಲಿ “ಬನ” ಚಿತ್ರದ ಮೊದಲ “ನಾಗ” ಹಾಡಿಗೆ ಮನಸೋತ ತುಳುನಾಡು! Jide Nage Song

ಯಕ್ಷದ್ರುವರ ಧ್ವನಿಯಲ್ಲಿ “ಬನ” ಚಿತ್ರದ ಮೊದಲ “ನಾಗ” ಹಾಡಿಗೆ ಮನಸೋತ ತುಳುನಾಡು! Jide Nage Song
ಯಕ್ಷದ್ರುವರ ಧ್ವನಿಯಲ್ಲಿ “ಬನ” ಚಿತ್ರದ ಮೊದಲ “ನಾಗ” ಹಾಡಿಗೆ ಮನಸೋತ ತುಳುನಾಡು! Jide Nage Song
Published on

ಪ್ರಮುಖ ಮುಖ್ಯಾಂಶಗಳು

  • ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ “ನಾಗ ”ಹಾಡು “ಜಿಡೆ ನಾಗೆ” ಬಿಡುಗಡೆ
  • ಕೆ.ಕೆ ಪೇಜಾವರ ಅವರ ಸಾಹಿತ್ಯಕ್ಕೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾಯನ
  • ಪ್ರತಿಷ್ಠಿತ ಲಹರಿ ಮ್ಯೂಸಿಕ್​ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ
ಬೆಂಗಳೂರು: ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ “ನಾಗ ”ಹಾಡು  “ಜಿಡೆ ನಾಗೆ” ( Jide Nage Song )  ಬಿಡುಗಡೆಗೊಂಡಿದ್ದು ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ.  
ಕೆ.ಕೆ ಪೇಜಾವರ ಅವರ ಸಾಹಿತ್ಯ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾಯನ ಹಾಗು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಅವರ ಸತತ ಮೂರನೇ ಹಿಟ್ ಹಾಡು ಇದಾಗಿದೆ. ಈ ಜೋಡಿ ಈ ಹಿಂದೆ ಧರ್ಮ ದೈವ ಹಾಗು ಧರ್ಮ ಚಾವಡಿ ಚಿತ್ರದ ಎರಡು ಹಿಟ್ ಹಾಡುಗಳನ್ನು ತುಳುನಾಡಿಗೆ ನೀಡಿತ್ತು ಎಂಬುದು ವಿಶೇಷ.   
ಪ್ರತಿಷ್ಠಿತ ಲಹರಿ ಮ್ಯೂಸಿಕ್​ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ. ಹಾಡಿನ ಗ್ರಾಫಿಕ್ಸ್ ಕೆಲಸ ಗಮನ ಸೆಳೆದಿದೆ. 
ಈಷಿ ಪ್ರೊಡಕ್ಷನ್ ಅಡಿಯಲ್ಲಿ  ಮನೋಹರ್ ರೈ ವೈಪಾಲ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಮಾಧ್ಯಮ ಲೋಕದ ಜನಪ್ರಿಯ ನಿರೂಪಕ ಜಯಪ್ರಕಾಶ್ ಶೆಟ್ಟಿ ಮೊದಲ ಸಲ ಬಣ್ಣ ಹಚ್ಚಿದ್ದು ವಿಶೇಷ. ಚಿತ್ರ ತುಳು ಮತ್ತು ಕನ್ನಡ ಎರಡರಲ್ಲೂ ನಿರ್ಮಾಣವಾಗುತ್ತಿದ್ದು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net