ಅಂದಹಾಗೆ, ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) 'ತೈಲ ಆಘಾತಗಳಿಂದ ರಕ್ಷಣೆ' ಎಂಬ ಶೀರ್ಷಿಕೆಯ 10 ಅಂಶಗಳ ಯೋಜನೆಯನ್ನು ಬಿಡುಗಡೆ ಮಾಡಿದೆ. ವಾಹನ ಬಳಕೆಯನ್ನು ನಿಯಂತ್ರಿಸುವುದು, ಹೆದ್ದಾರಿಗಳಲ್ಲಿ ವೇಗ ಮಿತಿಗಳನ್ನು ಕಡಿಮೆ ಮಾಡುವುದು, ಜನರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದು ಮತ್ತು ಅನಿಲದಿಂದ ವಿದ್ಯುತ್‌ಗೆ ಬದಲಾಯಿಸುವುದು ಸೇರಿದಂತೆ ಸರ್ಕಾರಗಳಿಗೆ ಶಿಫಾರಸುಗಳನ್ನು ಮಾಡಿದೆ. ಈ ಬೆಳವಣಿಗೆ ಮತ್ತಷ್ಟು ಮುಂದುವರಿದರೆ, ಇಡೀ ಜಗತ್ತು ಮತ್ತೊಂದು ದೊಡ್ಡ ಲಾಕ್ಡೌನ್ಗೆ ದೂಡಲ್ಪಡುತ್ತದೆ. ಈ ಪರಿಸ್ಥಿತಿ ಬರುತ್ತದಾ? ಅಥವಾ ಯುದ್ಧದ ಕಾರ್ಮೋಡ ಕವಿದು ಮತ್ತೆ ಜಗತ್ತು ಸಹಜ ಸ್ಥಿತಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್).