ತಿಥಿ ಸಿನಿಮಾ ಖ್ಯಾತಿಯ ಸಿಂಗ್ರೀಗೌಡ ಅಲಿಯಾಸ್​ ಸೆಂಚುರಿ ಗೌಡ ಇನ್ನಿಲ್ಲ! Century Gowda

ತಿಥಿ ಸಿನಿಮಾ ಖ್ಯಾತಿಯ ಸಿಂಗ್ರೆಗೌಡ ಅಲಿಯಾಸ್​ ಸೆಂಚುರಿ ಗೌಡ
ತಿಥಿ ಸಿನಿಮಾ ಖ್ಯಾತಿಯ ಸಿಂಗ್ರೆಗೌಡ ಅಲಿಯಾಸ್​ ಸೆಂಚುರಿ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಿಥಿ ಸಿನಿಮಾ ಖ್ಯಾತಿಯ​ ಸೆಂಚುರಿ ಗೌಡ ಇನ್ನಿಲ್ಲ
  • ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ತಮ್ಮ ಸ್ವಗ್ರಾಮ ಸಿಂಗ್ರೆಗೌಡನ ಕೊಪ್ಪಲಿನಲ್ಲಿ ವಿಧಿವಶ
  • ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ತಿಥಿ ಮೂಲಕ ಸೆಂಚುರಿ ಗೌಡ ಎಂದೇ ಖ್ಯಾತಿ ಪಡೆದಿದ್ದರು
ಮಂಡ್ಯ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಿಥಿ ಸಿನಿಮಾ ಖ್ಯಾತಿಯಸಿಂಗ್ರೀಗೌಡ ಅಲಿಯಾಸ್​ ಸೆಂಚುರಿ ಗೌಡ ( Century Gowda ) ನಿನ್ನೆ (ಜ.04) ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಅವರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ತಮ್ಮ ಸ್ವಗ್ರಾಮ ಸಿಂಗ್ರೆಗೌಡನ ಕೊಪ್ಪಲಿನಲ್ಲಿ ವಿಧಿವಶರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ತಿಥಿ ಸಿನಿಮಾ ಮೂಲಕ ಸೆಂಚುರಿ ಗೌಡ ಎಂದು ಖ್ಯಾತಿ ಪಡೆದಿದ್ದರು. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಎಂಬ ಪಾತ್ರ ಸಿಕ್ಕಿತ್ತು. ಇದರಿಂದ ಸೆಂಚುರಿ ಗೌಡ ಎಂದೇ ಮನೆ ಮಾತಾಗಿದ್ದರು. ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದು, ಕುಟುಂಬಸ್ಥರು ಹಾಗೂ ಬಂಧು-ಬಳಗದವರು ಕಂಬನಿ ಮಿಡಿದಿದ್ದಾರೆ.

ಇತ್ತೀಚೆಗೆ ಗಡ್ಡಪ್ಪ ಸಾವು

ಕಳೆದ ವರ್ಷ ನವೆಂಬರ್​ 12ರಂದು ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ವಯೋ ಸಹಜ ಅನಾರೋಗ್ಯದಿಂದ ಸಾವಿಗೀಡಾದರು. ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಂಡ್ಯ ಜಿಲ್ಲೆಯ ತಮ್ಮ ಸ್ವರ್ಗಾಮ ನೊದೆ ಕೊಪ್ಪಲಿನಲ್ಲಿ ಕೊನೆಯುಸಿರೆಳೆದರು. ತಿಥಿ ಸಿನಿಮಾದಲ್ಲಿ ಗಡ್ಡಪ್ಪನಾಗಿ ಖ್ಯಾತಿ ಪಡೆದ ಬಳಿಕ ತರ್ಲೆ ವಿಲೇಜ್ ಹಾಗೂ ಏನ್ ನಿನ್ ಪ್ರಾಬ್ಲಮ್ಮು ಚಿತ್ರದಲ್ಲಿ ನಟಿಸಿದ್ದರು. ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡನ ಮಗನ ಪಾತ್ರದಲ್ಲಿ ನಟಿಸಿದ್ದರು.

ತಿಥಿ ಸಿನಿಮಾ ಬಗ್ಗೆ

'ತಿಥಿ' (2015) ಸಿನಿಮಾವನ್ನು ರಾಮ್ ರೆಡ್ಡಿ ನಿರ್ದೇಶಿಸಿದರು. ಇದೊಂದು ಅಪರೂಪದ ಸಿನಿಮಾ. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಕತೆ ನಡೆಯುತ್ತದೆ. 101 ವರ್ಷ ವಯಸ್ಸಿನ ಸೆಂಚುರಿ ಗೌಡನ ಸಾವಿನ 11 ದಿನಗಳ ನಂತರ ನಡೆಯುವ ತಿಥಿ ಕಾರ್ಯಕ್ರಮದ ಸುತ್ತ ಸೆಂಚುರಿ ಗೌಡನ ಮೂರು ತಲೆಮಾರಿನ ವಂಶಸ್ಥರ ನಡುವೆ ನಡೆಯುವ ಹಾಸ್ಯಮಯ, ಜೀವಂತ ಘಟನೆಗಳನ್ನು ಕೇಂದ್ರೀಕರಿಸಿ ಕತೆಯನ್ನು ಎಣೆಲಾಗಿದೆ. ಗ್ರಾಮೀಣ ಜೀವನದ ನೈಜತೆ ಮತ್ತು ಸೂಕ್ಷ್ಮ ಹಾಸ್ಯದಿಂದ ಕೂಡಿದ ಈ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರೀಯ ಪ್ರಶಸ್ತಿ ಸಹ ಗೆದ್ದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net