KGF 2, RRR ರೆಕಾರ್ಡ್ ಉಡೀಸ್: ದಂಗಲ್​ ದಾಖಲೆಯನ್ನು ಧೂಳಿಪಟ ಮಾಡುತ್ತಾ ಧುರಂಧರ್​ 2? Dhurandhar 2

KGF 2, RRR ರೆಕಾರ್ಡ್ ಉಡೀಸ್ ಮಾಡಿದ ಧುರಂಧರ್​2
KGF 2, RRR ರೆಕಾರ್ಡ್ ಉಡೀಸ್ ಮಾಡಿದ ಧುರಂಧರ್​2
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸಿನಲ್ಲಿ ಮುಂದುವರೆದ ಧುರಂಧರ್​ ನಾಗಾಲೋಟ
  • ಬಿಡುಗಡೆಯಾದ ಹತ್ತೇ ದಿನದಲ್ಲಿ 1252 ಕೋಟಿ ಕಲೆಕ್ಷನ್​
  • KGF 2, RRR ರೆಕಾರ್ಡ್ ಉಡೀಸ್ ಮಾಡಿದ ಧುರಂಧರ್​2
  • 2000 ಕೋಟಿ ಕ್ಲಬ್ ಸೇರುತ್ತಾ ಧುರಂಧರ್​ 2?
ಮುಂಬೈ: ಬಾಲಿವುಡ್ ಚಿತ್ರಗಳು ದಕ್ಷಿಣದ ಸಿನಿಮಾಗಳ ಮುಂದೆ ಮಂಕಾಗುತ್ತಿವೆ ಎನ್ನುವ ಟ್ರಂಡ್​ ಸೆಟ್ಟಾಗಿತ್ತು. ಆದರೆ ಈಗ ಧುರಂಧರ್ 2 (Dhurandhar 2) ಮೂಲಕ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ದಕ್ಷಿಣದ ರೆಕಾರ್ಡ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ ಎಂದರೆ ಸುಳ್ಳಲ್ಲ. 

ದಕ್ಷಿಣದ ದೈತ್ಯ ಸಿನಿಮಾಗಳಿಗೆ ಶಾಕ್!

ಈಗಿನ ಲೆಕ್ಕಾಚಾರದ ಪ್ರಕಾರ, ಧುರಂಧರ್ 2 ವಿಶ್ವಾದ್ಯಂತ ಬರೋಬ್ಬರಿ 1,252 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕೇವಲ ಹತ್ತು ದಿನಗಳಲ್ಲಿ ಪ್ರಶಾಂತ್ ನೀಲ್ ಅವರ ಕೆಜಿಎಫ್ 2 (₹1215 ಕೋಟಿ) ಮತ್ತು ರಾಜಮೌಳಿ ಅವರ ಆರ್​ಆರ್​ಆರ್​ (₹1230 ಕೋಟಿ) ಸಿನಿಮಾಗಳ ಲೈಫ್‌ಟೈಮ್ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಅಷ್ಟೇ ಅಲ್ಲ, ಶಾರುಖ್ ಖಾನ್ ಅವರ ಜವಾನ್ (₹1160 ಕೋಟಿ) ದಾಖಲೆಯನ್ನೂ ಇದು ಅಳಿಸಿಹಾಕಿದೆ.
ಮಾಹಿತಿಯ ಪ್ರಕಾರ, ಮೊದಲ ವಾರದಲ್ಲೇ ಈ ಸಿನಿಮಾ ಭಾರತದಲ್ಲಿ 674.17 ಕೋಟಿ ಗಳಿಸಿತ್ತು. ಈಗ ವಿದೇಶಗಳಲ್ಲೂ ಈ ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಸುಮಾರು 34 ಮಿಲಿಯನ್ ಡಾಲರ್ (ಅಂದಾಜು ₹322 ಕೋಟಿ) ಬಾಚಿಕೊಂಡಿದೆ.

ದಂಗಲ್ ರೆಕಾರ್ಡ್ ಮುರಿಯುತ್ತಾ ಧುರಂಧರ್?

ಸಿನಿಮಾ ವಿಶ್ಲೇಷಕರ ಪ್ರಕಾರ, ಈ ಸಿನಿಮಾ ಶೀಘ್ರದಲ್ಲೇ ತನ್ನ ಮೊದಲ ಭಾಗವಾದ ಧುರಂಧರ್ ಮೊದಲ ಭಾಗದ 1,300 ಕೋಟಿ ದಾಖಲೆಯನ್ನು ಮುರಿಯಲಿದೆ. ಈಗ ಎಲ್ಲರ ಕಣ್ಣು ಮುಂದಿರುವುದು ಬಾಹುಬಲಿ 2 ಮತ್ತು ಪುಷ್ಪ 2 ತಲುಪಿದ 1,800 ಕೋಟಿ ಗಡಿ ಮೇಲೆ. ಒಂದು ವೇಳೆ ಇದೇ ವೇಗ ಮುಂದುವರಿದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಮೀರ್ ಖಾನ್ ಅವರ ದಂಗಲ್ ಮಾತ್ರ ಸಾಧಿಸಿದ 2,000 ಕೋಟಿ ಕ್ಲಬ್ ಅನ್ನು ಈ ಸಿನಿಮಾ ಸೇರುತ್ತಾ? ಎಂಬ ಕುತೂಹಲ ಮನೆ ಮಾಡಿದೆ.

ಹಿಂಸೆ ಮತ್ತು ಆಕ್ಷನ್ ಬಗ್ಗೆ ಪರ-ವಿರೋಧ ಚರ್ಚೆ

ಸಿನಿಮಾದಲ್ಲಿ ತೋರಿಸಲಾದ ಕ್ರೂರ ಹಿಂಸೆ ಮತ್ತು ರಾಜಕೀಯ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕೆಲವರು ಇದು ತುಂಬಾ ವೈಲೆಂಟ್ ಆಗಿದೆ ಎಂದು ಟೀಕಿಸಿದರೆ, ಅಭಿಮಾನಿಗಳು ಮಾತ್ರ ದಕ್ಷಿಣದ ಸಿನಿಮಾಗಳಲ್ಲಿ ಆಕ್ಷನ್ ಇದ್ದರೆ ಹೊಗಳುತ್ತೀರಿ, ಬಾಲಿವುಡ್‌ನಲ್ಲಿ ಯಾಕೆ ಟೀಕಿಸುತ್ತೀರಿ? ಎಂದು ಪ್ರಶ್ನಿಸುತ್ತಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net