ಇದೊಂದು ಬಕ್ವಾಸ್ ಸಿನಿಮಾ; ಮುಸ್ಲಿಂಮರನ್ನು ದ್ವೇಷಿಸುವಂತೆ ಮಾಡುತ್ತಿದೆ; ಧುರಂಧರ್ 2 ಬಗ್ಗೆ ಓವೈಸಿ ಕಿಡಿನುಡಿ! Asaduddin Owaisi on Dhurandhar 2
ಇದೊಂದು ಬಕ್ವಾಸ್ ಸಿನಿಮಾ ಎಂದ ಓವೈಸಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ಇದೊಂದು ಬಕ್ವಾಸ್ ಸಿನಿಮಾ ಎಂದ ಓವೈಸಿ
ಇದರಲ್ಲಿ ಮುಸ್ಲಿಮರ ಮೇಲೆ ದ್ವೇಷದ ಹೊರತು ಮತ್ತೇನಿಲ್ಲ ಎಂದ ಹೈದರಾಬಾದ್ ಸಂಸದ
ಹೈದರಾಬಾದ್: ಮಾರ್ಚ್ 19 ರಂದು ತೆರೆಕಂಡು ಭಾರತೀಯ ಸಿನಿಮಾ ರಂಗದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವ ಸಿನಿಮಾ ಯಾವುದೆಂದರೆ ಅದು ಧರಂಧರ್ 2: ದಿ ರಿವೆಂಜ್ ಸಿನಿಮಾ. ಬಿಡುಗಡೆಯಾದ ಒಂದೇ ವಾರದಲ್ಲಿ ಸಾವಿರ ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿರುವ ಈ ಸಿನಿಮಾ ತನ್ನ ಗಳಿಕೆಯನ್ನು ದಿನ ಕಳೆದಂತೆ ಹೆಚ್ಚಿಸಿಕೊಳ್ಳತ್ತಲೆ ಇದೆ.
ಆದರೆ ಈ ಸಿನಿಮಾವನ್ನು ಎಷ್ಟು ಜನ ಹೊಗಳುತ್ತಿದ್ದಾರೋ ಅಷ್ಟೇ ಜನ ತೆಗಳುತ್ತಲೂ ಕೆಲವರು ಬೊಗಳುತ್ತಲೂ ಇದ್ದಾರೆ. ಈದೀಗ ಈ ಸಿನಿಮಾ ಬಗ್ಗೆ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi on Dhurandhar 2) ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಛೀ..ಇದೊಂದು ಸಿನಿಮವೇ?
ಧುರಂಧರ್ 2 ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಓವೈಸಿ, ಇದೊಂದು ಸಿನಿಮವೇ? ಮೂರು ಗಂಟೆಯ ಬಕ್ವಾಸ್ ಎಂದು ಕಿಡಿಕಾರಿದ್ದಾರೆ.
ಜನ ನನ್ನ ಮಾತನ್ನೇ ಒಂದು ಗಂಟೆಗೆ ಮೀರಿ ಕೇಳುವುದಿಲ್ಲ, ಇನ್ನೂ ಈ ಮೂರು ಗಂಟೆಯ ಸಿನಿಮಾವನ್ನು ನೋಡುತ್ತಾರಾ?. ನಾನು ಕೇಳಿದಂತೆ ಈ ಸಿನಿಮಾದಲಿ ಅತೀಯಾದ ಹಿಂಸೆ, ಅವಾಚ್ಯ ಪದ ಮತ್ತು ಮುಸ್ಲಿಂಮರ ಮೇಲೆ ದ್ವೇಷದ ಹೊರತಾಗಿ ಬೇರೇನೂ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಏನನ್ನು ತೋರಿಸಿದ್ದಾರೆ?
ಈ ಧುರಂಧರ್ ಸಿನಿಮಾದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕ ದೇಶ ಮತ್ತು ಹೇಗೆ ಈ ದೇಶ ಭಾರತವನ್ನು ನಾಶ ಪಡಿಸಲು ಪ್ರಯತ್ನಿಸುತ್ತದೆ ಎನ್ನುವುದನ್ನು ತೋರಿಸಿದೆ. ಈ ಸಿನಿಮಾದ ಕತೆ ಕಾಲ್ಪನಿಕ ಎಂದು ಸಿನಿಮಾದ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.
ಅದರೆ ಈ ಸಿನಿಮಾದಲ್ಲಿ ಭಾರತದ ಮೇಲೆ ಪಾಕಿಸ್ತಾನದಿಂದ ನಡೆದ ಕೆಲ ನೈಲ ದಾಳಿಗಳನ್ನು ಮತ್ತು ನಿಜ ಜೀವನದಲ್ಲಿ ಬದುಕಿದ್ದ ಮತ್ತು ಬದುಕಿರುವ ಹಲವರು ಪಾತ್ರಗಳನ್ನು ತೋರಿಸಿರುವ ಕಾರಣ ಪ್ರೇಕ್ಷಕರಿಗೆ ಈ ಸಿನಿಮಾ ಒಂದು ರೀತಿಯ ಡಾಕ್ಯುಮೆಂಟರಿ ರೀತಿ ಭಾಸವಾಗಿದೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).