ಹಿಂದಿಗೆ ಉಪ್ಪು ಹುಳಿ ಖಾರ ಹುಡ್ಗ

Uppu huli Khara
Published on

ಬೆಂಗಳೂರು: ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪು್ಪ ಹುಳಿ ಖಾರ’ ಸಿನಿಮಾದ ಮೂರು ಜನ ನಾಯಕರಲ್ಲಿ ಕೊಂಚ ಗಮನ ಸೆಳೆದಿದ್ದ ಶಶಿ ದೇವರಾಜ್ ಈಗ ಬಾಲಿವುಡ್​ಗೆ ಹಾರಿದ್ದಾರೆ.

ಹೌದು, ತಮಿಳಿನಲ್ಲಿ ವಿಕ್ರಮ್ ನಾಯಕತ್ವದಲ್ಲಿ ನಿರ್ವಣವಾಗಿದ್ದ ‘ಕಂದಸಾಮಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸುಸಿ ಗಣೇಶನ್ ಬಾಲಿವುಡ್​ನಲ್ಲಿ ಡೈರೆಕ್ಟ್ ಮಾಡುತ್ತಿರುವ ಹೊಸ ಚಿತ್ರದಲ್ಲಿ ಶಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕನ್ನಡಿಗರಾದ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಇದು ತಮಿಳಿನ ‘ತಿರುಟ್ಟು ಪಯ್ಯ’ ಚಿತ್ರದ ರಿಮೇಕ್ ಆಗಿದೆ.

ಈ ಹಿಂದಿ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅವರ ಶಿಷ್ಯ ವಿನೀತ್ ಕುಮಾರ್ ನಾಯಕರಾಗಿದ್ದು, ‘ಐರಾವತ’ ಖ್ಯಾತಿಯ ಊರ್ವಶಿ ರೌತೇಲ ನಾಯಕಿಯಾಗಿದ್ದಾರೆ. ನಾಯಕನ ಗೆಳೆಯನ ಪಾತ್ರದಲ್ಲಿ ಶಶಿ ಇದ್ದಾರಂತೆ. ‘ನಿರ್ವಪಕ ರಮೇಶ್ ರೆಡ್ಡಿಯವರ ಮೂಲಕ ನನಗೆ ಹಿಂದಿ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಅದರಲ್ಲಿ ಸುಸಿ ಗಣೇಶನ್ ಅವರ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಸಂತಸದ ವಿಚಾರ. ಈಗಾಗಲೇ ಕಾಶಿ, ಲಖನೌ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಶೂಟಿಂಗ್ ಮುಗಿಸಿದ್ದೇನೆ ಎನ್ನುತ್ತಾರೆ ಶಶಿದೇವರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net