More

    ಬೆಂಗಳೂರು ಹುಡುಗ್ರ ಜತೆ ವೈನಿಧಿ; ಮುಂದುವರಿಯಿತು ಜೈಜಗದೀಶ್ ಪುತ್ರಿಯ ಸಿನಿಮಾ ‘ಯಾನ’ 

    ಬೆಂಗಳೂರು: ‘ಯಾನ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದಿದ್ದ ನಟಿ ವೈನಿಧಿ ಜಗದೀಶ್, ಈಗ ಮತ್ತೊಂದು ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಬೆಂಗಳೂರು ಬಾಯ್ಸ್​ ಎಂಬ ಹೊಸ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ.

    ಈ ಹಿಂದೆ, ‘ಲಂಡನ್​ನಲ್ಲಿ ಲಂಬೋದರ’ ನಿರ್ದೇಶಿಸಿದ್ದ ರಾಜ್ ಸೂರ್ಯ ಈಗ ‘ಬೆಂಗ್ಳೂರ್ ಬಾಯ್್ಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಾಲ್ವರು ನಾಯಕರು, ಒಬ್ಬ ನಾಯಕಿಯ ಸುತ್ತ ಈ ಸಿನಿಮಾ ಸಾಗಲಿದ್ದು, ಕಾಮಿಡಿ ಶೈಲಿಯಲ್ಲಿ ಚಿತ್ರ ಮೂಡಿಬರಲಿದೆಯಂತೆ. ಆ ಚಿತ್ರದ ಬಗ್ಗೆ ನಟಿ ವೈನಿಧಿ ಕೆಲವೊಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಮೊದಲ ಸಿನಿಮಾ ‘ಯಾನ’ ಬಳಿಕ ಸಾಕಷ್ಟು ಸಿನಿಮಾ ಅವಕಾಶಗಳು ಬಂದವು.

    ಪರಭಾಷೆಯಿಂದಲೂ ಆಫರ್ ಬಂದಿದ್ದವು. ಆದರೆ, ಒಳ್ಳೆಯ ತಂಡದ ಜತೆ ಕೆಲಸ ಮಾಡಬೇಕೆಂಬ ಆಸೆ ನನಗಿತ್ತು. ಹೀಗಿರುವಾಗಲೇ ‘ಬೆಂಗಳೂರು ಬಾಯ್್ಸ ಕಥೆ ಕೇಳಿ ಇಂಪ್ರೆಸ್ ಆದೆ. ಚಿತ್ರದಲ್ಲಿ ನಾಲ್ವರು ನಾಯಕರು ಇರಲಿದ್ದು, ನಾನೊಬ್ಬಳೇ ನಾಯಕಿ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ವೈನಿಧಿ. ಇನ್ನು ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸುವ ಅವರು, ‘‘ಯಾನ’ ಸಿನಿಮಾದಲ್ಲಿ ಬಬ್ಲಿ ಬಬ್ಲಿ ರೀತಿಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ.

    ಇಲ್ಲಿ ಸಂಪ್ರದಾಯಸ್ಥ ಹುಡುಗಿಯಾಗಿ ಹೋಮ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದಷ್ಟೇ ಹೇಳುತ್ತಾರೆ. ‘ಬೆಂಗಳೂರು ಬಾಯ್್ಸ ಚಿತ್ರದಲ್ಲಿ ‘ಹ್ಯಾಪಿ ಬರ್ತ್​ಡೇ’ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಿದ ಸಚಿನ್ ಚೆಲುವರಾಯಸ್ವಾಮಿ, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಚಂದನ್ ಆಚಾರ್ ಮತ್ತು ‘ಇರುವುದೆಲ್ಲವ ಬಿಟ್ಟು’ಚಿತ್ರದ ಶ್ರೀಮಹದೇವ್ ನಾಯಕರಾಗಿ ನಟಿಸಲಿದ್ದು, ಇನ್ನೋರ್ವ ನಾಯಕನ ಆಯ್ಕೆ ಇನ್ನಷ್ಟೇ ಆಗಬೇಕಿದೆ.

    ರಿಜೋ ಪಿ ಜಾನ್ ಛಾಯಾಗ್ರಹಣ, ಆಲ್ ಓಕೆ ಖ್ಯಾತಿಯ ಅಲೋಕ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮಾರ್ಚ್ ಮೂರನೇ ವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

    ಸಸ್ಪೆನ್ಸ್ ಥ್ರಿಲ್ಲರ್​ನಲ್ಲಿ ವೈಷ್ಣವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts