More

    ದರ್ಶನ್ ‘ಡೆವಿಲ್’ ಸಿನಿಮಾಗೆ ಇವರೇ ನಾಯಕಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾವು ಡಿಸೆಂಬರ್ 29ರಂದು ತೆರೆಕಂಡಿತ್ತು. ಈ ಸಿನಿಮಾವು ನಟ ದರ್ಶನ್ ಅವರ ವೃತ್ತಿ ಬದುಕಿನಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಕಾಟೇರ ಸಿನಿಮಾವು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸುವುದಕ್ಕೂ ಮುನ್ನವೇ ಓಟಿಟಿ ಕದ ತಟ್ಟಿದೆ.

    ಇದನ್ನೂ ಓದಿ:ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು? 

    ಪ್ರತಿಭಾವಂತ ನಿರ್ದೇಶಕ ಮಿಲನಾ ಪ್ರಕಾಶ್ ನಿರ್ದೇಶನ ಮಾಡಲಿರುವ ‘ಡೆವಿಲ್: ದಿ ಹೀರೋ’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿದೆ ಎಂದು ಗುಸುಗಸು ಚರ್ಚೆ ಶುರುವಾಗಿದೆ.

    ದರ್ಶನ್ 'ಡೆವಿಲ್' ಸಿನಿಮಾಗೆ ಇವರೇ ನಾಯಕಿ!

    ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ತಿರಸ್ಕರಿಸಿ ಮಾಡಿದರೆ ಅಪ್ಪಟ ಕನ್ನಡ ಸಿನಿಮಾಗಳನ್ನಷ್ಟೆ ಮಾಡುತ್ತೀನಿ ಎಂದು ಗಂಟಾ ಘೋಷವಾಗಿ ಹೇಳಿರುವ ದರ್ಶನ್, ತಮ್ಮ ಸಿನಿಮಾದಲ್ಲಿ ಬಹುತೇಕ ಕನ್ನಡದ ನಟ-ನಟಿಯರೇ ಇರುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲಿಯೂ ಸಹ ಹೊಸ ನಾಯಕಿಯರಿಗೂ ಅವಕಾಶ ನೀಡುತ್ತಾ ಬಂದಿದ್ದಾರೆ. ‘ಕಾಟೇರ’ ಸಿನಿಮಾನಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದರು. ಇದೀಗ ‘ಡೆವಿಲ್​’ ಸಿನಿಮಾದಲ್ಲಿ ತುಳುನಾಡಿನ ಚೆಲುವೆಗೆ ಅವಕಾಶ ನೀಡಲಾಗಿದೆ.

    ಗಾಸಿಪ್‌ಗಳ ಮಧ್ಯೆ ದರ್ಶನ್ ಮುಂದಿನ ಸಿನಮಾದ ಹೀರೋಯಿನ್‌ ಕರಾವಳಿ ಮೂಲದ ರಚನಾ ರೈ ಎನ್ನಲಾಗುತ್ತಿದೆ. ದರ್ಶನ್ ಮುಂದಿನ ಚಿತ್ರ ‘ಡೆವಿಲ್’ ದಿ ಹೀರೋ ಸಿನಿಮಾಗೆ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ರಚನಾ ‘ಡೆವಿಲ್’ ಸಿನಿಮಾಕ್ಕೆ ಆಯ್ಕೆ ಆಗುತ್ತಿದ್ದಂತೆ ಅವರ ಇನ್​ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆ ಫಾಲೋವರ್​ಗಳ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯಾರು ಈ ರಚನಾ ಎಂದು ಅಭಿಮಾನಿಗಳು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.

    ದರ್ಶನ್‌ ಅಭಿಮಾನಿಗಳು ರಚನಾ ರೈ ಇನ್‌ಸ್ಟಾಗ್ರಾಂ ಅಕೌಂಟ್ ತಡಕಾಡಲು ಆರಂಭಿಸಿದ್ದಾರೆ. ಹೀಗಾಗಿ ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ರಚನಾ ರೈ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.

    ರಚನಾ ರೈ ಹುಟ್ಟಿದ್ದು ಪುತ್ತೂರಿನಲ್ಲಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ‘ಸರ್ಕಸ್’ ಹೆಸರಿನ ಸೂಪರ್ ಹಿಟ್ ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸ್ತುತ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಇದೀಗ ‘ಡೆವಿಲ್’ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಚನಾ ರೈಗೆ ಭಾರಿ ಸಂಖ್ಯೆಯ ಫಾಲೋವರ್​ಗಳು ಹುಟ್ಟಿಕೊಂಡಿದ್ದಾರೆ. ಟ್ವಿಟ್ಟರ್​ನಲ್ಲಿ ರಚಿತಾ ಫಾಲೋ ಮಾಡುತ್ತಿರುವುದು ದರ್ಶನ್ ಒಬ್ಬರನ್ನೇ.

    ಮಿಲನಾ ಪ್ರಕಾಶ್ ಈ ಹಿಂದೆ ದರ್ಶನ್ ಜೊತೆಗೆ ‘ತಾರಕ್’ ಹೆಸರಿನ ಸಿನಿಮಾ ಮಾಡಿದ್ದರು. ಇದೀಗ ಎರಡನೇ ಸಿನಿಮಾಕ್ಕೆ ಈ ಜೋಡಿ ಒಂದಾಗುತ್ತಿದೆ. ಮಿಲನಾ ಪ್ರಕಾಶ್ ಸಹ ಬರೋಬ್ಬರಿ ಆರು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 2017ರಲ್ಲಿ ಬಿಡುಗಡೆ ಆಗಿದ್ದ ‘ತಾರಕ್’ ಮಿಲನಾ ಪ್ರಕಾಶ್ ನಿರ್ದೇಶಿಸಿದ್ದ ಕೊನೆಯ ಸಿನಿಮಾ. ಇದೀಗ ‘ಡೆವಿಲ್’ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

    ಡೆವಿಲ್’ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಆದರೆ ಫಸ್ಟ್ ಲುಕ್ ಟೆಸ್ಟ್‌ ಮಾತ್ರ ನಡೆದಿದೆ ಎನ್ನಲಾಗ್ತಿದೆ. ಭರ್ಜರಿ ಫೋಟೊಶೂಟ್ ಸಹ ಮಾಡಲಾಗಿದೆ ಎನ್ನಲಾಗ್ತಿದೆ. ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ‘ಡೆವಿಲ್’ ಚಿತ್ರಕ್ಕಿದೆ.

    300 ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಕನ್ನಡದ ನಟಿ! ಈ ಮಾತು ಕೇಳಿ ಕಿಚ್ಚ ಸುದೀಪ್​ ಹೇಳಿದ್ದೇನು ಗೊತ್ತಾ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts