'ಬಾನದಾರಿಯಲ್ಲಿ’ ಟ್ರೇಲರ್​ ಲಾಂಚ್​​ನಲ್ಲಿ ನಟ ಗಣೇಶ್​ ಭಾವುಕ!

Untitled design - 2023-09-05T194558.252
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಗೋಲ್ಡನ್​ ಸ್ಟಾರ್​, ನಟ ಗಣೇಶ್​ ಅಭಿನಯದ ಬಹುನಿರೀಕ್ಷಿತ 'ಬಾನದಾರಿಯಲ್ಲಿ' ಸಿನಿಮಾದ ಟ್ರೇಲರ್​ ಲಾಂಚ್​ ಈವೆಂಟ್​ ಬೆಂಗಳೂರಿನ ಮಂತ್ರಿ‌ಮಾಲ್​ನಲ್ಲಿ ಅದ್ದೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಗಣೇಶ್​ ಭಾವುಕರಾಗಿದ್ದಾರೆ.

ನಗರದ ಮಂತ್ರಿ‌ಮಾಲ್​ನಲ್ಲಿ ಅದ್ದೂರಿಯಾಗಿ ನಡೆದ 'ಬಾನದಾರಿಯಲ್ಲಿ' ಚಿತ್ರದ ಟ್ರೇಲರ್​ ಈವೆಂಟ್​ನಲ್ಲಿ ಖ್ಯಾತ ನಟ-ನಟಿಯರು ಭಾಗಿಯಾಗಿದ್ದರು. ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಹಾಗೂ ರೀಷ್ಮ ನಾನಯ್ಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪವರ್​ ಸ್ಟಾರ್, ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದ ಗಣೇಶ್, ಅಪ್ಪುಗಾಗಿ 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡನ್ನು ಹಾಡಿದರು. ಕೀನ್ಯಾದಲ್ಲಿ‌ ನಡೆದ ಶೂಟಿಂಗ್ ಬಗ್ಗೆ ಸಂತಸ ವ್ಯಕ್ತಪಡಿಸಿದ ನಟ, ಚಿತ್ರದ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ತಾಯಿಯನ್ನು ನೆನೆದು ಭಾವುಕರಾದರು.

ಕೆಆರ್​ಜಿ ಸ್ಟುಡಿಯೋಸ್​ ನಿರ್ಮಾಣದ ಚಿತ್ರ ಇದಾಗಿದ್ದು, ಶ್ರೀವಾರಿ ಅವರ ಚೊಚ್ಚಲ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್​ನ ಮೂರನೇ ಚಿತ್ರಕ್ಕೆ ಇದೀಗ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದ್ದು, ಇದೇ ಸೆಪ್ಟಂಬರ್​ 28ಕ್ಕೆ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net