

ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿರ್ದೇಶಕ ಗುರು ಪ್ರಸಾದ್ ಅವರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
'ಮಠ' ಸಿನಿಮಾ ಖ್ಯಾತಿಯ ಗುರುಪ್ರಸಾದ್ ಅವರನ್ನ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ. ಶ್ರೀನಿವಾಸ್ ಎಂಬುವವರಿಗೆ ಹಣ ವಂಚನೆ ಹಾಗೂ ಮೋಸ ಮಾಡಿದ್ದಾರೆ ಎಂಬ ಆರೋಪ ಗುರುಪ್ರಸಾದ್ ಮೇಲಿದೆ. ಗುರುಪ್ರಸಾದ್ ಕೊಟ್ಟಿರುವ ಚೆಕ್ ಬೌನ್ಸ್ ಆಗಿದೆ. ಈ ಸಂಬಂಧ ನಟನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾನು ಅವರ ಮನೆಯಲ್ಲಿ ಸಮಸ್ಯೆ ಇತ್ತು. ಆ ಕಾರಣಕ್ಕೆ 2016ರಲ್ಲಿ ಅವರಿಗೆ ಹಣ ನೀಡಿದ್ದೆ. ಆದರೆ ಹಣ ವಾಪಸ್ ಕೊಟ್ಟಿರಲಿಲ್ಲ. ಹಣ ಕೇಳಲು ಹೋದಾಗೆಲ್ಲ ಅವಾಚ್ಯವಾಗಿ ನಿಂದಿಸುತ್ತಿದ್ದರು. ನಾನು ಎಷ್ಟೇ ಕೇಳಿಕೊಂಡರೂ ಹಣ ನೀಡಲಿಲ್ಲ. ಅನಿವಾರ್ಯವಾಗಿ ನಾನು ದೂರು ಕೊಡಬೇಕಾಯ್ತು. 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ನಾನು ಅವರ ಅಭಿಮಾನಿ, ಅವರು ನನ್ನ ಗುರುಗಳು. ನಾನು ಚಿತ್ರಕ್ಕೆ ಎಂದು ಹಣ ಹೂಡಿಲ್ಲ ಎಂದು ಶ್ರೀನಿವಾಸ್ ಹೇಳಿದರು.