ದಾಸ್ತಾನು ಇರಿಸಿದ್ದ ಮರಳು ಕಳವು

sand mining
Published on

ಗಂಗೊಳ್ಳಿ: ತ್ರಾಸಿ ಗ್ರಾಮದ ಮೊವಾಡಿ ಚೌಡೇಶ್ವರಿ ದೇವಸ್ಥಾನ ಬಳಿ ಇರುವ ದಾಸ್ತಾನು ಪ್ರದೇಶದಲ್ಲಿ ದಾಸ್ತಾನು ಇರಿಸಿದ್ದ ಮರಳನ್ನು ಕಳವು ಮಾಡಲಾಗಿದೆ. ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿಮಿಟೆಡ್ ಮರಳು ವಿಭಾಗ ವ್ಯವಸ್ಥಾಪಕರಾಗಿದ್ದ ಮಂಜುನಾಥ ಎಇ ಹಾಗೂ ವಿಷ್ಣು ಟ್ರೈನಿ ಜಿಯೋಲಾಜಿಸ್ಟ್‌ರವರು ಸೌಪರ್ಣಿಕಾ ಮರಳು ದಾಸ್ತಾನು ಪ್ರದೇಶದಲ್ಲಿ ಸ್ಟಾಕ್ ಯಾರ್ಡ್ ಇನ್‌ಚಾರ್ಚ್ ಆಗಿದ್ದ ಸಮಯ ಸೌಪರ್ಣಿಕಾ ಹಿನ್ನೀರು ಪ್ರದೇಶದಲ್ಲಿ 9769.870 ಮೆಟ್ರಿಕ್ ಟನ್ ಮರಳನ್ನು ತೆಗೆದು ತ್ರಾಸಿ ಗ್ರಾಮದ ಮೊವಾಡಿ ಚೌಡೇಶ್ವರಿ ದೇವಸ್ಥಾನದ ಬಳಿ ಇರುವ ದಾಸ್ತಾನು ಪ್ರದೇಶದಲ್ಲಿ ಕೆಎಸ್‌ಎಂಸಿಎಲ್ ನೇಮಿಸಿದ ಗುತ್ತಿಗೆದಾರ ಸುಧಾಕರ ಅವರು ಸಂಗ್ರಹಿಸಿ ಇರಿಸಿದ್ದರು. ಈ ಪೈಕಿ 7754 ಮೆಟ್ರಿಕ್ ಟನ್ ಮರಳನ್ನು ಸರ್ಕಾರದ ಆದೇಶದಂತೆ ಮರಳು ಮಿತ್ರ ಆಪ್ ಮೂಲಕ ಮಾರಾಟ ಮಾಡಲಾಗಿದೆ. ಇನ್ನುಳಿದ 2015.870 ಮೆಟ್ರಿಕ್ ಟನ್ ಮರಳಿನ ಪೈಕಿ ದಾಸ್ತಾನು ಸ್ಥಳದಲ್ಲಿ 630 ಮೆಟ್ರಿಕ್ ಟನ್ ಮರಳು ಮಾತ್ರ ಲಭ್ಯವಿದ್ದು ಉಳಿದ 1385.870 ಮೆಟ್ರಿಕ್ ಟನ್ ಮರಳನ್ನು ಯಾರೋ ಕಳ್ಳರು ಕಳವು ಮಾಡಿದ್ದಾರೆ ಎಂದು ಕೆಎಸ್‌ಎಂಸಿಎಲ್ ಪ್ರಭಾರ ವ್ಯವಸ್ಥಾಪಕ ವೆಂಕಟೇಶ ಕೆ.ಡಿ. ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net