ಟಿ20 ಸರಣಿ ಗೆಲ್ಲದ್ದಿದ್ರೂ… ಕಡೆಗೂ ಜಯಸೂರ್ಯ ಆಡಿದ್ದ ಮಾತು ಇಂದು ಸತ್ಯವಾಯ್ತು!

ವಿಜಯವಾಣಿ - 2024-08-09T085118.047
Published on

ನವದೆಹಲಿ: ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಅದೇ ಸಂತಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ, ಆ.07ರಂದು ನಡೆದ ಮೂರನೇ ಪಂದ್ಯದಲ್ಲಿಯೂ ಲಂಕಾ ಬೌಲರ್​​ಗಳ​ ದಾಳಿಗೆ ತತ್ತರಿಸಿದ ಭಾರತ, 138ಕ್ಕೆ ಆಲ್​ಔಟ್ ಆಗುವ ಮುಖೇನ ಸರಣಿಯನ್ನು ಕೈಚೆಲ್ಲಿತು. ಟಿ20 ಸಿರೀಸ್​ ಸೋತಿದ್ದ ಲಂಕಾ ಪಡೆ ಇದೀಗ ಏಕದಿನ ವಶಪಡಿಸಿಕೊಂಡಿದ್ದೇ ತಡ ಸಂಭ್ರಮ ಜೋರಾಗಿದೆ. ಮೊದಲ ಪಂದ್ಯ ಟೈ ಆದ ನಂತರ ಎರಡನೇ ಮ್ಯಾಚ್​ ಗೆಲ್ಲುವಲ್ಲಿ ವಿಫಲವಾದ ಭಾರತ, ಲಂಕಾ ಪಡೆಯ ಬೌಲರ್​ಗಳ ಆರ್ಭಟಕ್ಕೆ ನಲುಗಿದರು. ಅದೇ ರೀತಿ 3ನೇ ಪಂದ್ಯದಲ್ಲಿಯೂ ಆಡಿದ್ದು, ಆಲ್​ಔಟ್​ ಆಗಿ ತೀರ ಕಳಪೆ ಪ್ರದರ್ಶನ ತೋರಿತು.

ಟಿ20 ಸರಣಿ ಸೋತರು ಬೇಸರಗೊಳ್ಳದ ಶ್ರೀಲಂಕಾ ಪಡೆ, ತಾವು ಏಕದಿನ ಸಿರೀಸ್ ವಶಪಡಿಸಿಕೊಂಡೆವು ಎಂಬ ತೃಪ್ತಿಯಲ್ಲಿದೆ. ಇನ್ನು ಈ ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಎದುರು ನಾವು ಗೆದ್ದೇ ಗೆಲ್ಲುತ್ತೇವೆ ಎಂದಿದ್ದ ಶ್ರೀಲಂಕಾದ ಮಾಜಿ ಹಿರಿಯ ಕ್ರಿಕೆಟಿಗ ಸನತ್ ಜಯಸೂರ್ಯ, "ಭಾರತ ತಂಡದ ನ್ಯೂನತೆಗಳೇ ತಮ್ಮ ಗೆಲುವಿಗೆ ದೊಡ್ಡ ಕಾರಣವಾಗಲಿದೆ. ಸ್ಟಾರ್​ ಕ್ರಿಕೆಟಿಗರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಸರಣಿಗೆ ಇಲ್ಲಿದಿರುವುದೇ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ” ಎಂದು ಲೇವಡಿ ಮಾಡಿದ್ದರು. ಆದ್ರೆ, ಅವರ ಅನುಪಸ್ಥಿತಿಯಲ್ಲೇ 3-0 ಅಂತರದಿಂದ ಭಾರತ ಶ್ರೀಲಂಕಾ ವಿರುದ್ಧ ಸರಣಿ ಗೆದ್ದು ಬೀಗಿತು.

ಇನ್ನು ಐಪಿಎಲ್​ನ ರಾಜಸ್ಥಾನ ರಾಯಲ್ಸ್ ತಂಡದ ಜುಬಿನ್ ಭರುಚಾ ಶ್ರೀಲಂಕಾ ತಂಡಕ್ಕೆ ಹಲವು ಟಿಪ್ಸ್ ನೀಡಿದ್ದಾರೆ. ಭಾರತೀಯ ಆಟಗಾರರ ವಿರುದ್ಧ ಹೇಗೆ ಗೆಲ್ಲಬೇಕು ಎಂಬುದರ ಕುರಿತು ಹಲವಾರು ವಿಷಯ ತಿಳಿಸಿಕೊಟ್ಟಿದ್ದಾರೆ. ನಮ್ಮ ಬೌಲರ್​ಗಳು ಟೀಮ್ ಇಂಡಿಯಾ ಬ್ಯಾಟರ್​ಗಳನ್ನು ಕಾಡಲಿದ್ದಾರೆ. ಖಂಡಿತ ನಾವು ಟಿ20 ಹಾಗೂ ಏಕದಿನ ಸರಣಿ ಗೆಲ್ಲುತ್ತೇವೆ. ಇದು ನಮಗೆ ದೊಡ್ಡ ಲಾಭ ತರಲಿದೆ ಎಂದು ಸನತ್ ಉತ್ಸಾಹದಲ್ಲಿ ಭಾರೀ ಭರವಸೆ ವ್ಯಕ್ತಪಡಿಸಿದ್ದರು. ಆದ್ರೆ, ಅಂತಿಮವಾಗಿ ಟಿ20 ಸರಣಿ ಕಳೆದುಕೊಂಡ ಲಂಕಾ ಪಡೆ, ಅವರೇಳಿದಂತೆಯೇ ರೋಹಿತ್ ಪಡೆಯ ಬ್ಯಾಟರ್​​ಗಳನ್ನು ಅಬ್ಬರಿಸದಂತೆ ಕಟ್ಟುಹಾಕಿ, ಇದೀಗ ಏಕದಿನ ಸರಣಿ ತಮ್ಮದಾಗಿಸಿಕೊಂಡಿರುವುದು ಇಲ್ಲಿ ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net