ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೊರನಾಡು ಸದ್ದಿಲ್ಲದೆ ಗೋಶಾಲೆಗೆ ಭೇಟಿ ಕೊಟ್ಟು ಬಂದಿದ್ದಾರೆ. ಅಲ್ಲಿನ ಮುದ್ದು ಮುದ್ದು ಕರುಗಳನ್ನು ಮುದ್ದಾಡಿ ಹಣ್ಣು ಹಂಪಲು ತಿನಿಸಿ ಬಂದಿದ್ದಾರೆ. ಜತೆಗೆ ಅಲ್ಲಿನ ಕರುವೊಂದಕ್ಕೆ ಕಾಳಿ ಎಂದು ನಾಮಕರಣವನ್ನೂ ಮಾಡಿದ್ದಾರೆ. ಅಂದಹಾಗೆ, ದಾಬಸ್ಪೇಟೆಯಲ್ಲಿರುವ ಶ್ರೀಕೃಷ್ಣ ಗೋಶಾಲೆಯಿದು. ಅನಾಥ ಮತ್ತು ಗಾಯಗೊಂಡ ಗೋವುಗಳಿಗೆ ಇಲ್ಲಿ ಚಿಕಿತ್ಸೆ ನೀಡಿ ಪೋಷಿಸಲಾಗುತ್ತಿದೆ. ಈ ಗೋಶಾಲೆಗೆ ಭೇಟಿ ಕೊಟ್ಟ ವೇಳೆ ಸಂಯುಕ್ತಾ ತೆಗೆಸಿಕೊಂಡ ಒಂದಷ್ಟು ಫೋಟೋಗಳು ಇಲ್ಲಿವೆ..