ಫೌಜಿ ಗೇಮ್​ನಲ್ಲಿ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರಾ ಸುಶಾಂತ್​ ಸಿಂಗ್​?

Faug
Published on

ಚೀನಾ ಮೂಲದ ಆ್ಯಪ್​ ಮತ್ತು ಗೇಮಿಂಗ್​ ಅಪ್ಲಿಕೇಷನ್​ಗಳಿಗೆ ಕೇಂದ್ರ ಸರ್ಕಾರ ಬ್ಯಾನ್​ ಬಿಸಿ ಮುಟ್ಟಿಸುತ್ತಿದೆ. ಈಗಾಗಲೇ ಸಾಕಷ್ಟು ಅಪ್ಲಿಕೇಷನ್​ಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಗೇಮಿಂಗ್​ ಅಪ್ಲಿಕೇಷನ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಪಬ್ಜಿ ಸಹ ಬ್ಯಾನ್​ ಮಾಡಲಾಗಿತ್ತು. ಆ ಆ್ಯಪ್​ಅನ್ನೇ ಹೋಲುವ ಇನ್ನೊಂದು ಅಪ್ಲಿಕೇಷನ್​ ಅನ್ನು ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು. ಇದೀಗ ಅದೇ ಫೌಜಿ ಸುಶಾಂತ್​ ಸಿಂಗ್​ ವಿಚಾರವಾಗಿ ಸುದ್ದಿಯಲ್ಲಿದೆ.

ಅರೇ ಗೇಮ್​ಗೂ ಸುಶಾಂತ್​ಗೂ ಎಲ್ಲಿಂದ ಎಲ್ಲಿಯ ಸಂಬಂಧ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಅಂದರೆ, ಈ ಗೇಮ್​ನಲ್ಲಿ ಸೈನಿಕನಾಗಿ ಪಾತ್ರದಲ್ಲಿ ಸುಶಾಂತ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸುಶಾಂತ್​ ಅವರ ಮುಖವನ್ನೇ ಗೇಮ್​ನಲ್ಲಿ ಬಳಸಿಕೊಂಡು ನಾಯಕ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲ ವದಂತಿಗಳಿಗೆ ಗೇಮ್​ ಅಭಿವೃದ್ಧಿಪಡಿಸಿದ ತಂಡ ತೆರೆಎಳೆದಿದೆ.

‘ಇದೊಂದು ತಳಬುಡ ಇಲ್ಲದ ಸುದ್ದಿ. ಸುಶಾಂತ್​ ಸಿಂಗ್​ ಅವರ ಮುಖವನ್ನೇ ಹೋಲುವ ಫೋಟೋವನ್ನು ನಾವು ಬಳಿಸಿಕೊಂಡಿಲ್ಲ. ಶಟರ್ ಸ್ಟಾಕ್​ ಸಂಸ್ಥೆ ಕಡೆಯಿಂದ ಬೇರೆಯದೇ ಫೋಟೋವನ್ನು ಪಡೆದುಕೊಂಡು ಗೇಮ್​ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ ಇದು ಪೋಸ್ಟರ್ ಅಷ್ಟೇ ಇನ್ನೂ ಹಲವು ವಿಶೇಷತೆಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

ಪ್ರಧಾನಿ ಮೋದಿಯ ಆತ್ಮನಿರ್ಭರತಾ ಅಭಿಯಾನಕ್ಕೆ ಸ್ಫೂರ್ತಿ ನೀಡುವ ಮತ್ತು ಅದರಿಂದ ಪ್ರೇರೇಪಿತಗೊಂಡು ಫೌಜಿ ಅಪ್ಲಿಕೇಷನ್​ಅನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ಈ ಗೇಮಿಂಗ್​ ಅಪ್ಲಿಕೇಷನ್​ ಅಕ್ಟೋಬರ್​ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದ್ದು, ಬೆಂಗಳೂರು ಮೂಲದ ಎನ್ ​ಕೋರ್​ ಸಂಸ್ಥೆ ಇದನ್ನು ಸಿದ್ಧಪಡಿಸಿದೆ.

ಫಿಯರ್​ಲೆಸ್​ ಆ್ಯಂಡ್​ ಯೂನೈಟೆಡ್​ ಗಾರ್ಡ್ಸ್ ಎಂಬ ಹೆಸರಿರುವ ಈ ಗೇಮಿಂಗ್​ ಆ್ಯಪ್​ ಹಲವು ವಿಶೇಷತೆಗಳಿಂದ ಕೂಡಿದ್ದು, ಸೈನಿಕರ ತ್ಯಾಗ ಬಲಿದಾನದ ಬಗ್ಗೆಯೂ ಗೇಮ್​ನಲ್ಲಿ ತಿಳಿಸಲಾಗಿದೆಯಂತೆ. ಅಷ್ಟೇ ಅಲ್ಲ ಗೇಮ್​ ಸಲುವಾಗಿ ಬಳಕೆ ಮಾಡುವ ನೆಟ್​ನಲ್ಲಿ ಶೇ. 20 ಪ್ರತಿಶತದ ಆದಾಯ ನೇರವಾಗಿ ಭಾರತ್​ಕೀ ವೀರ್​ ಟ್ರಸ್ಟ್​ಗೆ ಜಮಾವಣೆಯಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net